ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 17ನೇ ಸೀಸನ್‌ಗಾಗಿ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾತ್ರ ನಮ್ಮ ತಂಡದ ನಾಯಕ ಯಾರು ಎಂಬ ಪ್ರಶ್ನೆ ಚಿಂತೆಗೀಡು ಮಾಡಿದೆ. ಡೆಲ್ಲಿ ಫ್ರಾಂಚೈಸಿ ಮಾತ್ರವಲ್ಲ. ರಿಷಬ್ ಪಂತ್ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಐಪಿಎಲ್ ಅಭಿಮಾನಿಗಳಿಗೂ ಕಾಡುತ್ತಿದೆ.
ಮಾರ್ಚ್ 5 ರಂದು ಬೆಂಗಳೂರಿನ ಎನ್‌ಸಿಎಯಲ್ಲಿ ರಿಷಬ್ ಪಂತ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಪಂತ್ ಐಪಿಎಲ್‌ಗೆ ಮರಳುತ್ತಾರೆ ಎನ್ನಲಾಗಿತ್ತು. ಹೀಗಾಗಿ ಈ ಫಿಟ್ನೆಸ್ ಪರೀಕ್ಷೆಯ ಫಲಿತಾಂಶ ಕುತೂಹಲ ಹೆಚ್ಚಿಸಿದೆ. ಆದರೆ, ಈ ಫಿಟ್ನೆಸ್ ಪರೀಕ್ಷೆಯ ವರದಿ ರಹಸ್ಯವಾಗಿ ಉಳಿದಿದೆ.
ಮೂಲಗಳ ಪ್ರಕಾರ ಐಪಿಎಲ್‌ನಿಂದ ಪಂತ್ ನಿರ್ಗಮಿಸುವ ಸುದ್ದಿ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಿಸಿಸಿಗೆ ಸಲ್ಲಿಸಿದ ತಂಡದ ಪಟ್ಟಿಯಲ್ಲಿ ರಿಷಬ್ ಪಂತ್ ಹೆಸರನ್ನು ಸೇರಿಸಲಾಗಿಲ್ಲ ಎಂದು ಹೇಳಲಾಗಿದೆ.