ರಾಜ್ಯದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಕಬಾಬ್ ಬ್ಯಾನ್? ಇಂದು ಅಧಿಕೃತ ಘೋಷಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುದುಚೇರಿ, ತಮಿಳಿನಾಡಿನ ನಂತರ ಇದೀಗ ಕರ್ನಾಟವೂ ಪ್ರಸಿದ್ಧ ರಸ್ತೆ ಬದಿ ತಿಂಡಿಗಳಾದ ಕಬಾಬ್, ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯನ್ನು ನಿಷೇಧಿಸುವ ಸಾಧ್ಯತೆಗಳು ದಟ್ಟವಾಗಿವೆ.

ಈ ಆಹಾರ ಪದಾರ್ಥಗಳಲ್ಲಿ ಬಣ್ಣಕ್ಕಾಗಿ ರೋಡಮೈನ್ ಬಿ ಬಣ್ಣಗಳನ್ನು ಬಳಸಲಾಗುತ್ತಿದೆ ಇದು ಕ್ಯಾನ್ಸರ್ ರೋಗವನ್ನು ಉಂಟು ಮಾಡುವ ರಾಸಾಯನಿಕವಾಗಿದೆ.

ರೋಡಮೈನ್ ಬಿ ಕೆಮಿಕನ್ನು ಜವಳಿ, ಕಾಗದ, ಗುಲಾಬಿಗೆ ಮತ್ತಷ್ಟು ಬಣ್ಣ ನೀಡಲು ಬಳಕೆ ಮಾಡಲಾಗುತ್ತದೆ. ಇದು ದೇಹಕ್ಕೆ ಸೇರಿದರೆ ಕ್ಯಾನ್ಸರ್ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ.

ರೋಡಮೈನ್ ಬಿ ಕೆಮಿಕಲ್ ಖಾರದಪುಡಿ, ಕೆಂಪುಮೆಣಸು, ಬಣ್ಣ ಬಣ್ಣದ ಚಾಕೋಲೆಟ್‌ಗಳಲ್ಲಿಯೂ ಇರುತ್ತದೆ. ಈಗಾಗಲೇ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ರೋಡಮೈನ್ ಬಿ ಅಂಶ ಪತ್ತೆಯಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಬೆರಳಿಗೆ ಎಟಾದರೆ ಇಡೀ ಕೈ ಕತ್ತರಿಸುತ್ತಾರೆಯ? ಇದು ರಾಜ್ಯ ಸರಕಾರದ ಇನ್ನೊಂದು ತರಲೆ. ಬಣ್ಣ ವಿಷಕಾರಿ ಆದರೆ ಬಣ್ಣ ನಿಷೇಧಿಸುವುದನ್ನು ಬಿಟ್ಟು ಆಹಾರ ಪದಾರ್ಥವನ್ನು ನಿಷೇಧಿಸುವುದು ಎಷ್ಟು ಸರಿ?

LEAVE A REPLY

Please enter your comment!
Please enter your name here

error: Content is protected !!