ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದು, ಇದರ ಬೆನ್ನಲ್ಲೇ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಭಾರತದ ನಡೆಯು ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ‘ಇನ್ನಷ್ಟು ಸಂಕೀರ್ಣ’ಗೊಳಿಸುತ್ತದೆ ಎಂಬುದನ್ನು ಚೀನಾ ಪುನರುಚ್ಚರಿಸಿದೆ.
ಮೋದಿ ಭೇಟಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ‘ಅರುಣಾಚಲ ಪ್ರದೇಶ ಭಾರತದ ಭಾಗ ಎಂಬುದನ್ನು ಚೀನಾ ಒಪ್ಪುವುದಿಲ್ಲ’. ‘ಝಾಂಗ್ನಾನ್ ಪ್ರದೇಶವು ಚೀನಾಕ್ಕೆ ಸೇರಿದೆ’ ಎಂದಿದ್ದಾರೆ.
ಅರುಣಾಚಲ ಪ್ರದೇಶವನ್ನು ಚೀನಾ ‘ದಕ್ಷಿಣ ಟಿಬೆಟ್’ ಎಂದು ಕರೆಯುತ್ತದೆ. ಮಾತ್ರವಲ್ಲ, ‘ಝಾಂಗ್ನಾನ್’ ಎಂದು ಹೆಸರಿಟ್ಟಿದೆ. ಪ್ರಧಾನಿ ಸೇರಿದಂತೆ ಭಾರತ ಇತರ ನಾಯಕರು ಇಲ್ಲಿಗೆ ಭೇಟಿ ನೀಡುವಾಗ ಚೀನಾ ಪ್ರತಿ ಬಾರಿಯೂ ತನ್ನ ಪ್ರತಿಭಟನೆ ಸಲ್ಲಿಸುತ್ತಾ ಬಂದಿದೆ.
ಮೋದಿ ಅವರು ಕಳೆದ ಶನಿವಾರ ಅರುಣಾಚಲಕ್ಕೆ ಭೇಟಿ ನೀಡಿದ್ದರಲ್ಲದೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ತವಾಂಗ್ ಸಂಪರ್ಕಿಸುವ ಸೇಲಾ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು.