ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿನ್ನು ಪೋಲೀಸ್ ಠಾಣೆಗೆ ತೆರಳದೆಯೇ ದೂರು ನೀಡಲು ಸಾಧ್ಯ!
ಹೌದು, ಕೇರಳ ಪೊಲೀಸ್ ಇಲಾಖೆ ಪೋಲ್ ( Pol- App) ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಡೌನ್ ಲೋಡ್ ಮಾಡಿಕೊಂಡು ಇದರ ಮೂಲಕವೇ ಪೋಲೀಸರಿಗೆ ದೂರು ಸಲ್ಲಿಸಬಹುದಾಗಿದೆ.
ಇದು ಕೇರಳ ಪೋಲಿಸ್ ಇಲಾಖೆಯ ಅಧಿಕೃತ ಅಪ್ಲಿಕೇಶನ್. ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ವಿವರಗಳನ್ನು ಇಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ, ಘಟನೆಯ ಸ್ಥಳ, ದಿನಾಂಕ, ವಿವರಣೆಯನ್ನು ದಾಖಲಿಸಿ ಪೋಲೀಸ್ ಠಾಣೆ ಮಿತಿ ಮತ್ತು ದೂರು ಕಳುಹಿಸಬೇಕಾದ ಕಚೇರಿಯನ್ನು ಆಯ್ಕೆ ಮಾಡಿ ಯಾರ ವಿರುದ್ಧ ದೂರು ದಾಖಲಾಗುತ್ತಿದೆಯೋ ಅವರ ವಿವರಗಳೊಂದಿಗೆ ಇಲ್ಲಿ ದೂರನ್ನು ಸಲ್ಲಿಸಬಹುದು.
ದೂರುದಾರರು ದೂರು ಸಲ್ಲಿಸಿದ ಸ್ವೀಕೃತಿ ಪತ್ರ ಕೂಡಾ ಇಲ್ಲಿ ಸಿಗಲಿದ್ದು, ಅಗತ್ಯವಿದ್ದಲ್ಲಿ ಇದನ್ನು ಡೌನ್ಲೋಡ್ ಮಾಡಲೂ ಅವಕಾಶ ಇದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.