ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಡಗಿ ಮೆಣಸಿನಕಾಯಿ ಹಠಾತ್ ಬೆಲೆ ಕುಸಿತದಿಂದಾಗಿ ರೈತರು ಸಿಟ್ಟಿಗೆದ್ದಿದ್ದು, ಎಪಿಎಂಸಿ ಮಾರುಕಟ್ಟೆಗೆ ಬೆಂಕಿ ಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ವಾಹನ ಸವಾರರು, ಪೊಲೀಸರು ಗಾಯಗೊಂಡಿದ್ದು ಒಟ್ಟು 47 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನೆಂದು ತಿಳಿಯಲು ವರದಿ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಶಾಮಕ ವಾಹನ ಸೇರಿ ಮೂರು ವಾಹನ, ಹತ್ತಾರು ಬೈಕ್‌ಗಳಿಗೆ ರೈತರು ಬೆಂಕಿ ಇಟ್ಟಿದ್ದಾರೆ. ಎಪಿಎಂಸಿ ಕಷೇರಿಯ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದೆ, ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ರೈತರು ಶಾಂತರಾಗಬೇಕು ಎಂದಿದ್ದಾರೆ.
ಒಂದೇ ದಿನದಲ್ಲಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 20 ಸಾವಿರ ರೂಪಾಯಿಯಿಂದ ಎಂಟು ಸಾವಿರ ರೂಪಾಯಿಗೆ ಕುಸಿದಿದೆ. ಇದರಿಂದಾಗಿ ರೈತರು ಸಿಟ್ಟಿಗೆದ್ದಿದ್ದಾರೆ. ಇದು ಬರೀ ಹಾವೇರಿ ಎಪಿಎಂಸಿಯಲ್ಲಿ ಮಾತ್ರವೋ ಅಥವಾ ಎಲ್ಲಾ ಕಡೆ ಬೆಲೆ ಕುಸಿತ ಆಗಿದೆಯೋ ಎಂದು ನೋಡಬೇಕಿದೆ ಎಂದಿದ್ದಾರೆ.