ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಸಿಎಸ್‌ಕೆ ತಂಡದ ನಾಯಕನಾಗಬಹುದು ಎಂದು ಅಂಬಾಟಿ ರಾಯುಡು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಟಾಕ್ ಶೋವೊಂದರಲ್ಲಿ ಮಾತನಾಡಿರುವ ರಾಯುಡು, ಎಂಎಸ್ ಧೋನಿ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ, ರೋಹಿತ್ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ಪ್ರಬಲ ನಾಯಕರಾಗಬಹುದು ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಇನ್ನೂ ಐದು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಬಹುದು. ಹಾಗಾಗಿ ಶೀಘ್ರದಲ್ಲೇ ಸಿಎಸ್ ಕೆ ತಂಡ ಸೇರುವ ಸಾಧ್ಯತೆ ಇದೆ. ರೋಹಿತ್ ಶರ್ಮಾ IPL 2025ನಲ್ಲಿ CSK ಗೆ ಸೇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.