ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣದ ಅರಣ್ಯಪ್ರದೇಶದಲ್ಲಿ ಮಂಗಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಶಿರಸಿ ತಾಲೂಕಿನ ನಿರ್ನಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿಯೇ ಮಂಗನ ಮೃತದೇಹ ಪತ್ತೆಯಾಗಿತ್ತು. ಇದೀಗ ಕುಮಟಾ ತಾಲೂಕಿನ ಗೋಕರ್ಣ ಅರಣ್ಯ ಪ್ರದೇಶದಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದ್ದು, ಆತಂಕ ಮೂಡಿದೆ.
ಮಂಗನ ಕಾಯಿಲೆ ಅಥವಾ ಇನ್ಯಾವುದಾದರೂ ಮಾರಣಾಂತಿಕ ಕಾಯಿಲೆಯಾ ಎಂದು ಜನರು ಭಯ ಪಟ್ಟಿದ್ದಾರೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.