‘ನಾರಿ ನ್ಯಾಯ್ ಗ್ಯಾರಂಟಿ’: ದೇಶದ ಮಹಿಳೆಯರಿಗಾಗಿ ಕಾಂಗ್ರೆಸ್ ನಿಂದ ಪಂಚ ಯೋಜನೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಹರಸಾಹಸ ಪಡುತ್ತಿದ್ದು, ಒಂದರ ಮೇಲೆ ಒಂದು ಗ್ಯಾರಂಟಿ ಘೋಷಿಸುತ್ತಿದ್ದು, ಇದೀಗ ಮಹಿಳೆಯರಿಗಾಗಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಲೋಕಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ.

ಕಾಂಗ್ರೆಸ್ ಘೋಷಿಸಿದ 5 ಹೊಸ ಗ್ಯಾರೆಂಟಿಗಳು

1) ಮಹಾಲಕ್ಷ್ಮಿ ಯೋಜನೆ
2) ಆದಿ ಅಬಾದಿ ಪೂರಾ ಹಕ್
3) ಶಕ್ತಿ ಕಾ ಸಮ್ಮಾನ್
4) ಅಧಿಕಾರ ಮೈತ್ರಿ
5) ಸಾವಿತ್ರಿ ಬಾಯಿ ಪುಲೆ ಹಾಸ್ಟೆಲ್

ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಕಾಂಗ್ರೆಸ್ ಇಂದು ‘ನಾರಿ ನ್ಯಾಯ್ ಗ್ಯಾರಂಟಿ’ ಘೋಷಿಸುತ್ತಿದೆ. ದರ ಅಡಿಯಲ್ಲಿ ಕಾಂಗ್ರೆಸ್ ಬಡ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೇ ಸರ್ಕಾರಿ ನೇಮಕಾತಿಯಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕು ನೀಡಲಾಗುವುದು ಎಂದು ಹೇಳಿದರು.

‘ನಾರಿ ನ್ಯಾಯ್ ಗ್ಯಾರಂಟಿ’ ಅಡಿಯಲ್ಲಿ ಕಾಂಗ್ರೆಸ್ 5 ಘೋಷಣೆಗಳನ್ನು ಮಾಡುತ್ತಿದೆ. ಮೊದಲನೆಯದಾಗಿ, ಮಹಾಲಕ್ಷ್ಮಿ ಗ್ಯಾರಂಟಿ – ಇದರ ಅಡಿಯಲ್ಲಿ, ಪ್ರತಿ ಬಡ ಕುಟುಂಬದಿಂದ ತಲಾ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಎರಡನೆಯದಾಗಿ, ಆದಿ ಆಬಾದಿ ಪೂರಾ ಹಕ್ – ಇದರ ಅಡಿಯಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರು ಹಕ್ಕುಗಳನ್ನು ಹೊಂದಿರುತ್ತಾರೆ.

ಮೂರನೆಯದಾಗಿ, ಶಕ್ತಿ ಕಾ ಸಮ್ಮಾನ್ – ಇದರ ಅಡಿಯಲ್ಲಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರ ಮಾಸಿಕ ಆದಾಯಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.

ನಾಲ್ಕನೆಯದಾಗಿ, ಅಧಿಕಾರ್ ಮೈತ್ರಿ – ಇದರ ಅಡಿಯಲ್ಲಿ ಮಹಿಳೆಯರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಸಹಾಯ ಮಾಡಲು ಪ್ರತಿ ಪಂಚಾಯತ್ ನಲ್ಲಿ ಪ್ಯಾರಾಲೀಗಲ್ ಅನ್ನು ನೇಮಿಸಲಾಗುವುದು. ಐದನೆಯದಾಗಿ, ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ – ಭಾರತ ಸರ್ಕಾರವು ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಕನಿಷ್ಠ ಒಂದು ಹಾಸ್ಟೆಲ್ ಅನ್ನು ನಿರ್ಮಿಸುತ್ತದೆ. ಈ ಹಾಸ್ಟೆಲ್ ಗಳ ಸಂಖ್ಯೆಯನ್ನು ದೇಶಾದ್ಯಂತ ದ್ವಿಗುಣಗೊಳಿಸಲಾಗುವುದು ಎಂದು ಘೋಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!