ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಫಿಡವಿಟ್ ಸಲ್ಲಿಸಿದೆ.
ಏಪ್ರಿಲ್ 01, 2019ರಿಂದ ಫೆಬ್ರುವರಿ 15, 2024ರ ನಡುವೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, ಇದುವರೆಗೆ 22,030 ಬಾಂಡ್‌ಗಳನ್ನು ನಗದೀಕರಿಸಲಾಗಿದೆ ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
ಬಾಂಡ್‌ಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಎಸ್‌ಬಿಐ ಹೊಂದಿದ್ದು, ಬಾಂಡ್‌ಗಳ ಖರೀದಿ, ಖರೀದಿದಾರರ ಹೆಸರು, ಮೊತ್ತ ನಗದೀಕರಿಸಿದ ದಿನಾಂಕ, ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಆಯೋಗಕ್ಕೆ ನೀಡಲಾಗಿದೆ’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 10, 2019 ರಿಂದ ಏಪ್ರಿಲ್ 11, 2019ರ ನಡುವೆ ಒಟ್ಟು 3,346 ಬಾಂಡ್‌ಗಳನ್ನು ಖರೀದಿಸಿದ್ದು, ಅದರಲ್ಲಿ 1,609 ಬಾಂಡ್‌ಗಳನ್ನು ನಗದೀಕರಿಸಲಾಗಿದೆ. ಏಪ್ರಿಲ್ 12, 2019ರಿಂದ ಫೆಬ್ರುವರಿ 15, 2024 ರವರೆಗೆ ಒಟ್ಟು 18,871 ಬಾಂಡ್‌ಗಳನ್ನು ಖರೀದಿಸಲಾಗಿದ್ದು, 20,421 ಬಾಂಡ್‌ಗಳನ್ನು ನಗದೀಕರಿಸಲಾಗಿದೆ ಎಂದು ಅಫಿಡವಿಟ್ ಹೇಳಿದೆ.
ಸುಪ್ರೀಂ ಕೋರ್ಟ್‌ನ ಆದೇಶದಂತೆ ಚುನಾವಣಾ ಬಾಂಡ್ ಪಡೆದವರ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಸಲ್ಲಿಸಿತ್ತು.ಈ ಮಾಹಿತಿಯನ್ನು ಮಾರ್ಚ್ 12 ರ ಸಂಜೆಯೊಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು.