ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯೊಂದರ ಚಿತ್ರೀಕರಣಕ್ಕೆ ಬಂದಿದ್ದ ವಿಡಿಯೋಗ್ರಾಫರ್, ವರನ ಸಹೋದರಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮುಜಾಫರ್‌ಪುರದಲ್ಲಿ ಮದುವೆಗೆ ಬಂದಿದ್ದ ವಿಡಿಯೋಗ್ರಾಫರ್ ವರನ ಅಪ್ರಾಪ್ತ ಸಹೋದರಿಯೊಂದಿಗೆ ಓಡಿ ಹೋಗಿದ್ದಾನೆ.
ಘಟನೆ ಬೆಳಕಿಗೆ ಬಂದ ನಂತರ ಬಾಲಕಿಯ ತಂದೆ ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 6 ರಂದು ಮಗಳು ಮನೆಯಿಂದ ಓಡಿ ಹೋಗಿದ್ದಳು ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಅವರ ಮಗಳನ್ನು ಗ್ರಾಮದ ವಿಡಿಯೋಗ್ರಾಫರ್ ಅಪಹರಿಸಿದ್ದಾನೆ ಎಂದು ತಿಳಿದುಬಂದಿದೆ. ತನ್ನ ಮಗನ ಮದುವೆಯ ಚಿತ್ರೀಕರಣಕ್ಕೆ ಅದೇ ವಿಡಿಯೋಗ್ರಾಫರ್ ನನ್ನು ನೇಮಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.