ಹೊಸದಿಗಂತ , ಬಳ್ಳಾರಿ:
ಕಳೆದ ಚುನಾವಣೆಯಲ್ಲಿ ಕೆಲವರು ವ್ಯವಸ್ಥಿತವಾಗಿ ನನ್ನನ್ನು ಅಜ್ಞಾತವಾಸಕ್ಕೆ ಕಳಿಸುವ ಕೆಲಸ ಮಾಡಿದ್ದರು. ಆದರೆ, ಅದು ಈ ಬಾರಿ ನಡೆಯೋಲ್ಲ. ಜನರ ಶಕ್ತಿ ಮುಂದೆ ಯಾವ ಶಕ್ತಿನೂ ಕೆಲಸ ಮಾಡೋಲ್ಲ ಎಂದು ಮಾಜಿ ಸಚಿವ ಹಾಗೂ ಲೋಕಸಭೆ ಚುನಾವಣೆಯ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಸಿರಗುಪ್ಪ ರಸ್ತೆಯ ಗೃಹ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 35 ವರ್ಷಗಳಿಂದ ನಿರಂತರ ಜನಸೇವೆಯಲ್ಲಿರುವೆ, ಪಕ್ಷ ನನ್ನನ್ನು ಗುರುತಿಸಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ, ಜನರ ಆಶ್ರೀವಾದ ಇರೋವರೆಗೂ ದುಷ್ಟ ಶಕ್ತಿ ಏನು ಮಾಡೋಲ್ಲ, ಬಿಜೆಪಿಯಲ್ಲಿ ಶ್ರೀರಾಮುಲುಗೆ ಅನಾನುಕೂಲ ಮಾಡಬೇಕು ಎಂದು ಹೇಳಿದರು.
ಕೆಲವರು, ದ್ವೇಷದ, ಮೋಸದ ರಾಜಕಾರಣ ಮಾಡಿದರು, ಕಳೆದ 35 ವರ್ಷಗಳಿಂದ ನಾನು ರಾಜಕೀಯ ಜೀ, ಅಜಾತಶತ್ರು ಆಗಿ ಕೆಲಸ ಮಾಡಿಕೊಂಡು ಬಂದಿರುವೆ, ನನಗೆ ನನ್ನ ಜನರೇ ಶ್ರೀರಕ್ಷೆ ಅವರು ಇರೂವರೆಗು ದುಷ್ಟ ಶಕ್ತಿಗಳು ಎನೂ ಮಾಡೋಕೆ ಆಗೋಲ್ಲ ಎಂದರು.
ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆ ಒಳ್ಳೇಯ ವಾತಾವರಣವಿದೆ, ಮೋದಿ ಅವರ ಜನಪರ ಆಡಳಿತವನ್ನು ದೇಶದ ಜನರು ಕಂಡಿದ್ದು, ಈ ಬಾರಿ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದರು.
ಜನಾರ್ಧನ ರೆಡ್ಡಿ ನನ್ನ ಸ್ನೇಹಿತ, ರಾಜಕಾರಣ ಬೇರೆ, ಸಂಬಂಧಗಳೇ ಬೇರೆ, ಯಾರೋ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಜನಶಕ್ತಿ ಮುಂದೆ ಯಾವುದೇ ಶಕ್ತಿ ಕೆಲಸ ಮಾಡೋಲ್ಲ, ಜನರ ಆಶ್ರಿವಾದದಿಂದ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವೆ ಎಂದರು.