ಬಿಜೆಪಿ, ಜೆಡಿಎಸ್ ಎನ್ನವವರು ಮರೆತು ಬಿಡಿ…ಮುಂದೆಯೂ ಕಾಂಗ್ರೆಸ್ ಸರ್ಕಾರ: ಡಿಸಿಎಂ ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ, ರಾಯಚೂರು :

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನತೆ ಅಧಿಕಾರಕ್ಕೆ ಬಂದoತೆ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ಎಲ್ಲ ವರ್ಗದ, ಸಮುದಾಯದ ಜನತೆಗೆ ನೀಡುತ್ತಿದ್ದೇವೆ. ಐದು ಗ್ಯಾರಂಟಿ ಸೇರಿ ಕೈ ಗಟ್ಟಿ ಆಯಿತು. ಐದು ಬೆರಳು ಸೇರಿ ಒಂದು ಮುಷ್ಠಿ ಆಯಿತು. ಇದನ್ನು ನೋಡಿ ಕಮಲ ಮುದುರಿ ಹೋಯಿತು. ತೆನೆಯನ್ನು ಬೀಸಾಕಿ ಕಮಲವನ್ನು ತಬ್ಬಿಕೊಂಡಲು ಮಹಿಳೆ ಇನ್ನೇನಿದ್ದರು ಕೈ ಮಾತ್ರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಹೇಳಿದರು.

ಗುರುವಾರ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಆಯೋಜಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ, ಜೆಡಿಎಸ್ ಎನ್ನವವರು ಮರೆತು ಬಿಡಿ. ಈ ಸರ್ಕಾರ ಕೇವಲ ಐದು ವರ್ಷದ ಸರ್ಕಾರವಲ್ಲ ಮುಂದಿನ ೯ ವರ್ಷಗಳ ಕಾಲವೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುತ್ತದೆ ಎಂದರು.

ದೇಶದಲ್ಲಿ ಮಲ್ಲಿಕಾರ್ಜುನ ಅವರ ಮುಂದಾಳತ್ವದಲ್ಲಿ ಚುನಾವಣೆಯಲ್ಲಿ ಎದುರಿಸಲಾಗುತ್ತಿದೆ. ದೇಶ ಬದಲಾಗುತ್ತಿದೆ. ತುಂಗಭದ್ರಾ ನದಿ ನೀರಿನಿಂದ ನವಲಿ ಬಾಗದ ಜನತೆಗೆ ಪ್ರಯೋಜನವಾಗುವ ಯೋಜನೆಯನ್ನು ರೂಪಿಸುವುದಕ್ಕೆ ಆಂದ್ರ ಪ್ರದೇಶದೊಂದಿಗೆ ಮಾತನಾಡಲಾಗುತ್ತಿದೆ. ಅದಕ್ಕೊಂದು ಶಕ್ತಿ ತುಂಬುವಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.

ಅಗತ್ಯ ವಸ್ತುಗಳ ಬೆಳೆ ಹೆಚ್ಚಳ, ಮಕ್ಕಳ ಶಾಲಾ ಶುಲ್ಕ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಹೆಚ್ಚಳದಿಂದ ಮಹಿಳೆಯರಿಗೆ ಕುಟುಂಬ ನಿರ್ವಹಣೆ ತೊಂದರೆ ಆಗುವುದಕ್ಕೆ ಆಸರೆ ಆಗಲೆಂದು ಕುಟುಂಬದ ಮುಖ್ಯಸ್ಥೆಗೆ ೨ ಸಾವಿರರೂಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ರಾಜ್ಯಾದ್ಯಂತ ಸಂಚರಿಸಿ ಅವರು ಪ್ರವಾಸವನ್ನು ಮಾಡುವುದಕ್ಕೆ ಅನುಕೂಲವನ್ನು ಮಾಡಿಕೊಡಲಾಗಿದೆ.ಉದ್ಯೋಗ ಇಲ್ಲದ ಯುವ ಸಮುದಾಯಕ್ಕೆ ಪ್ರತಿ ತಿಂಗಳು ಹಣ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಸಚಿವರು,ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!