ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಯೊಬ್ಬರಿಗೆ 3 ಲಕ್ಷದ 95 ಸಾವಿರ ರೂ. ಪಂಗನಾಮ ಹಾಕಲಾಗಿದೆ. ಈ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಅವ್ಯವಹಾರ ಆರೋಪ ಕೇಳಿ ಬಂದಿದೆ. ರಜನಿಕಾಂತ್ ಅವರ ಹೊಸ ಚಿತ್ರ ತಲೈವಾ-171 ಕೋಡ್ ರೆಡ್ ಚಿತ್ರದ ಹೆಸರಿನೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಯುವತಿ ಆರೋಪಿಯನ್ನು ಸಂಪರ್ಕಿಸಿದ್ದಾಳೆ. ಈ ವೇಳೆ ಕಾಸ್ಟಿಂಗ್ಗೆ ಹಣ ಖರ್ಚು ಆಗುತ್ತದೆ ಎಂದು ಹೇಳಿ ಹಂತ ಹಂತವಾಗಿ 3 ಲಕ್ಷ 94 ಸಾವಿರ ಹಣ ಪಡೆದುಕೊಂಡಿದ್ದಾನೆ. ಇದೇ ರೀತಿ ಆನ್ಲೈನ್ ಮೂಲಕವೇ ಅಡಿಷನ್ ಮಾಡಿ ಯುವತಿಯರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಹಣ ಪಡೆದ ಖದೀಮ ಯುವತಿಗೆ ತಿಳಿಸದೆ ಓಡಿ ಹೋಗಿದ್ದಾನೆ. ಸದ್ಯ ಈ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ನಡಿ ದೂರು ದಾಖಲು ಮಾಡಲಾಗಿದೆ.