ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಕಡೆಗೂ ಮರ್ಯಾದೆ ಪ್ರಶ್ನೆ ಹ್ಯಾಷ್ಟ್ಯಾಗ್ಗೆ ಉತ್ತರ ಸಿಕ್ಕಿದೆ. ಇದೊಂದು ಸಿನಿಮಾ ಟೈಟಲ್. ಹೌದು, ಸಕ್ಕತ್ ಸ್ಡುಡಿಯೋಸ್ ಮೂಲಕ ಆರ್ಜೆ ಪ್ರದೀಪ್ ನಿರ್ಮಾಣದ ಸಿನಿಮಾ.
ಇದರ ಪೋಸ್ಟರ್ ಕೂಡ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು,” ದುಡ್ಡಿರೋರ್ಗೆ ಎಲ್ಲಾ, ದುಡಿಯೋರಿಗೆ ಏನೂ ಇಲ್ಲ” ಅನ್ನೋ ಟ್ಯಾಗ್ಲೈನ್ ಇದೆ. ಇದೊಂದು ಮಧ್ಯಮ ವರ್ಗದ ಸ್ಟೋರಿ ಆಗಿದ್ದು, ಚಾಮರಾಜಪೇಟೆ ಸುತ್ತಾಮುತ್ತಾ ಶೂಟಿಂಗ್ ಕಂಪ್ಲೀಟ್ ಆಗಿದೆ.
View this post on Instagram