ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮೆಲ್ಲರ ಪ್ರೀತಿಯ ಡಾ ಮಂಜುನಾಥ್ ಅವರು ರಾಜಕೀಯಕ್ಕಿಳಿದಿದ್ದು ನಿಜಕ್ಕೂ ದುರದೃಷ್ಟಕರ, ಜನರ ಸೇವೆ ಮಾಡೋದಕ್ಕೆ ರಾಜಕಾರಣ ಒಂದೇ ದಾರಿನಾ? ಎಂದು ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಣ ಏನೇ ಇರಲಿ, ಇಷ್ಟು ದಿನ ಪಡೆದಿದ್ದೆಲ್ಲವನ್ನೂ ಈಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಜನರ ಸೇವೆ ಮಾಡೋಕೆ ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ್ದು? ಸಮಾಜ ಕಟ್ಟೋಕೆ ಸಾಕಷ್ಟು ದಾರಿ ಇದೆ ಎಂದಿದ್ದಾರೆ.
ನಮ್ಮ ಪ್ರೀತಿಯ ವೈದ್ಯ
ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ?ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?— Nagathihalli Chandrashekara (@NomadChandru) March 14, 2024