ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಮತ್ತೆ ಬಂದ್ ಆಗಿದೆ. ಈಗಾಗಲೇ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದ ಕಾರಣ ಹಲವು ಬಾರಿ ಮಾಲ್‌ಗೆ ಬೀಗ ಜಡಿಯಲಾಗಿತ್ತು.
ಈ ಬಾರಿ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಜಡಿದು ಲೈಸೆನ್ಸ್ ಕೂಡ ಕ್ಯಾನ್ಸಲ್ ಮಾಡಿದ್ದಾರೆ.
ಸುಮಾರು 32 ಕೋಟಿ ರೂಪಾಯಿವರೆಗೆ ಮಾಲ್ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪಾಲಿಗೆ ಒನ್ ಟೈಮ್ ಪೇಮೆಂಟ್‌ಗೆ ಅವಕಾಶ ಕೊಟ್ಟಿತ್ತು. ಆದರೆ ಹಣ ಕಟ್ಟಲಾಗದ ಕಾರಣ ಮಾಲ್‌ಗೆ ಬೀಗ ಬಿದ್ದಿದೆ.