ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲಾ ಕಾರಗೃಹ ಸ್ಥಳಾಂತರಿಸಲು ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಜಿಲ್ಲಾ ಕಾರಗೃಹಕ್ಕೆ ಸೇರಿದ ಜಾಗವನ್ನ ಇತರ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಮತ್ತು ರಾಮನಗರ-ಚನ್ನಪಟ್ಟಣ ಮಧ್ಯೆ ನೂತನ ಕಾರಗೃಹ ನಿರ್ಮಾಣಕ್ಕೆ ಸೂಚಿಸಿದ್ದಾರೆ.
ಕಾರಾಗೃಹವನ್ನು ತ್ವರಿತವಾಗಿ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಉದ್ದೇಶದಿಂದ 4ರಿಂದ 5 ಎಕರೆ ಜಮೀನು ಸ್ವಾಧೀನಪಡಿಸಿಕೊಂಡ ನಂತರ ರಾಮನಗರ ಜೈಲು ಸ್ಥಳಾಂತರಿಸಲಾಗುವುದು ಎನ್ನಲಾಗಿದೆ. 2007 ರಲ್ಲಿ ನಿರ್ಮಿಸಲಾದ ರಾಮನಗರ ಜೈಲಿನಲ್ಲಿ 300 ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಇದರಿಂದ ಕೈದಿಗಳ ಸಂಖ್ಯೆ ಹೆಚ್ಚಿರುವುದರಿಂದ ಕಾರಾಗೃಹವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಜೈಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದೀಗ ಡಿಸಿಎಂ ಕೂಡ ಈ ಬಗ್ಗೆ ಆಸಕ್ತಿ ವಹಿಸುತ್ತಿದ್ದು, ಸಾಮಾನ್ಯ ಕಾರಾಗೃಹವನ್ನು ಕೇಂದ್ರ ಕಾರಾಗೃಹವನ್ನಾಗಿ ಪರಿವರ್ತಿಸಲು ನಿವೇಶನಗಳನ್ನು ಹುಡುಕಲಾಗುತ್ತಿದೆ ಎನ್ನಲಾಗಿದೆ.