ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಬಿಡುಗಡೆಯಾಗುವ ಮೊದಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಬಾಲಕೃಷ್ಣ ಅಭಿನಯದ ‘ಅಖಂಡ 2’ ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ಥಿಯೇಟರ್‌ನಲ್ಲಿ ಆರಂಭಿಕ ದಿನಗಳಲ್ಲಿ ಜೋರಾಗಿ ಓಡಿದರೂ, ದೀರ್ಘಕಾಲ ಬಾಕ್ಸಾಫೀಸ್‌ನಲ್ಲಿ ಹಿಡಿತ ಸಾಧಿಸಲು ಈ ಸಿನಿಮಾ ಸ್ವಲ್ಪ ಹಿನ್ನಡೆ ಅನುಭವಿಸಿತು. ಇದೀಗ ಈ ಚಿತ್ರ ಒಟಿಟಿ ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಬಾಲಕೃಷ್ಣ–ಬೋಯಪಾಟಿ ಶ್ರೀನು ಕಾಂಬಿನೇಷನ್ ಚಿತ್ರವಾಗಿರುವ ‘ಅಖಂಡ 2’ ಗೆ ಬಿಡುಗಡೆಯ ಮೊದಲ ದಿನಗಳಲ್ಲಿ ಉತ್ತಮ ಓಪನಿಂಗ್ಸ್ ಸಿಕ್ಕಿತ್ತು. ಆದರೆ ನಿರೀಕ್ಷಿತ ಮಟ್ಟದ ವರ್ಡ್ ಆಫ್ ಮೌತ್ ಸಿಗದ ಕಾರಣ, ಚಿತ್ರದ ಗಳಿಕೆಯಲ್ಲಿ ನಿಧಾನಗತಿ ಕಾಣಿಸಿಕೊಂಡಿತು. 13 ದಿನಗಳ ಪ್ರದರ್ಶನದ ಅಂತ್ಯದ ವೇಳೆಗೆ ಸಿನಿಮಾ ಸುಮಾರು 87 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Kitchen tips | ತರಕಾರಿಗಳು ಫ್ರಿಜ್‌ನಲ್ಲಿ ಜಾಸ್ತಿ ದಿನ ಫ್ರೆಶ್ ಆಗಿ ಉಳಿಸ್ಕೊಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಇದೀಗ ಈ ಚಿತ್ರವನ್ನು ಡಿಜಿಟಲ್ ವೇದಿಕೆಗೆ ತರಲು ನೆಟ್‌ಫ್ಲಿಕ್ಸ್ ಮುಂದಾಗಿದೆ. ಭಾರೀ ಮೊತ್ತಕ್ಕೆ ‘ಅಖಂಡ 2’ ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ ಎನ್ನಲಾಗಿದೆ. ಲಭ್ಯವಿರುವ ಮಾಹಿತಿಯಂತೆ, ಜನವರಿ 9ರಂದು ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.
ಕಥೆಯ ವಿಚಾರಕ್ಕೆ ಬಂದರೆ, ಮೊದಲ ಭಾಗ ಅಂತ್ಯಗೊಂಡ ಸ್ಥಳದಿಂದಲೇ ಕಥೆ ಮುಂದುವರಿಯುತ್ತದೆ. ಅಖಂಡ ರುದ್ರ ಹಿಮಾಲಯದಲ್ಲಿ ತಪಸ್ಸಿನಲ್ಲಿ ತೊಡಗಿರುವಾಗ, ಮತ್ತೊಂದೆಡೆ ಅವನ ಸಹೋದರ ಬಾಲ ಮುರಳಿಕೃಷ್ಣ ರಾಜಕೀಯ ಹಾಗೂ ದೇಶ ಸೇವೆಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ವೈಜ್ಞಾನಿಕ ಸಂಶೋಧನೆ, ಸೇನಾ ರಕ್ಷಣೆ ಮತ್ತು ಭಾವನಾತ್ಮಕ ಅಂಶಗಳು ಕಥೆಗೆ ತೀವ್ರತೆ ನೀಡುತ್ತವೆ.
ಒಟ್ಟಾರೆ, ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ‘ಅಖಂಡ 2’, ಒಟಿಟಿಯಲ್ಲಿ ಪ್ರೇಕ್ಷಕರಿಂದ ಹೊಸ ಸ್ವಾಗತ ಪಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

