ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇಂದು ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಜಾರಿ ವೇಳೆ ಬೆಳಗಾವಿ ಮೇಯರ್ ತಮ್ಮ ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಮನೆಗೆ ತೆರಳಿರುವ ಘಟನೆ ನಡೆದಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ. ತಮ್ಮ ಸರ್ಕಾರಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬೆಳಗಾವಿ ಕೊಲ್ಲಾಪುರ ವೃತ್ತದಲ್ಲಿ ಕಾರು ನಿಲ್ಲಿಸಿ ಒಂದಷ್ಟು ದೂರ ನಡೆದುಕೊಂಡೇ ಹೋದ ಮೇಯರ್ ನಂತರ ಆಟೋ ಮೂಲಕ ಮನೆಗೆ ತೆರಳಿದ್ದಾರೆ.
ಸರ್ಕಾರಿ ವಾಹನಬಿಟ್ಟು ಆಟೋದಲ್ಲಿ ಮನೆಗೆ ಹೋಗುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮೇಯರ್ ಸವಿತಾ ಕಾಂಬಳೆ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.