ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗಿದೆ ಅದು ಮಾತ್ರವಲ್ಲದೆ ಜನರ ದೇಣಿಗೆಯ ಹಣವನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಪಂಚ್ ಗ್ಯಾರಂಟಿ ಪಕ್ಷಾತೀತ ಸಮಾವೇಶದಲ್ಲಿ ಮಾತನಾಡಿದ ಅವರು. ಬಿಜೆಪಿಗೆ ಒಂದು ದಿನದಲ್ಲಿ 365 ಕೋಟಿ ಹಣ ಬಂದಿದೆ. ಅದನ್ನು ಕೊಟ್ಟವರು ಯಾರು? ನ್ಯಾಯಾಲಯದ ಆದೇಶದ ಹೊರತಾಗಿಯೂ ಬಿಜೆಪಿ ಸಲ್ಲಿಸಿದ ಪಟ್ಟಿಯನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿದೆ ಯಾಕೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇದಕ್ಕಾಗಿ ಸುಪ್ರೀಂ ಕೋರ್ಟ್ ಬಿಜೆಪಿಗೆ ಛೀಮಾರಿ ಹಾಕಿದ್ದು, ಜುಲೈನಲ್ಲಿ ಬಾಂಡ್ ನೀಡಿದವರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಹೇಳಿದೆ. ಯಾಕಪ್ಪಾ.. ಜುಲೈವರೆಗೆ ಟೈಮ್ ಬೇಕು ನಿಮಗೆ, ಒಂದು ಬಟನ್ ಹೊಡೆದ್ರೆ ಎಲ್ಲರ ಪಟ್ಟಿ ಬಂದ್ ಬಿಡುತ್ತೆ ಆದ್ರೂ ಯಾಕಪ್ಪ ಹಿಂದೇಟು ಎಂದು ಬಿಜೆಪಿ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.