ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಿದೆ. ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಇದಲ್ಲದೆ, ಚುನಾವಣೆ ಘೋಷಣೆಯಾದ ನಂತರ, ಇವಿಎಂ ಮತಯಂತ್ರಗಳನ್ನು ಹ್ಯಾಕ್ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ರಾಜೀವ್ ಕುಮಾರ್ ಕವಿತೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಸೋತಾಗಲೂ ಇವಿಎಂಗಳನ್ನು ದೂಷಿಸುವ ವಿರೋಧ ಪಕ್ಷಗಳಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.
ಇವಿಎಂ ಬಗ್ಗೆ ನಿಮಗೆ ಪ್ರಶ್ನೆಗಳಿವೆ ಎಂದು ನನಗೆ ಮೊದಲೇ ತಿಳಿದಿತ್ತು. ಅದಕ್ಕಾಗಿ ನಾನು ಈ ಬಗ್ಗೆ ಕವಿತೆ ರೂಪದಲ್ಲಿ ಇದಕ್ಕೆ ಉತ್ತರ ನೀಡುತ್ತೇನೆ ಎಂದು ಹೇಳಿದ ಚುನಾವಣಾ ಆಯುಕ್ತ ರಾಜೀವ್ ಕುಮಾರ್, “ಇದು ಇವಿಎಂ ಸ್ವಗತವೂ ಆಗಿದೆ. ಪ್ರತಿ ಬಾರಿ ನೀವು ಕಂಡ ಕನಸು ನನಸಾಗದಿದ್ದಾಗ ಇವಿಎಂಗಳನ್ನು ದೂಷಿಸುವುದು ಸರಿಯಲ್ಲ. ನೀವು ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ ಎಂದು ಇವಿಎಂ ಮೇಲೆ ಆರೋಪ ಹೊರಿಸುವುದು ಕೂಡ ಸೂಕ್ತವಲ್ಲ. ಕೊನೆಗೆ, ಫಲಿತಾಂಶ ಬಂದಾಗ ನೀವು ಅದನ್ನು ಸ್ವೀಕರಿಸಲು ಕೂಡ ಸಿದ್ಧರಿರುವುದಿಲ್ಲ” ಎನ್ನುವ ಮೂಲಕ ಪ್ರತಿ ಬಾರಿ ಚುನಾವಣೆ ಸೋತಾಗ ಇವಿಎಂಗಳನ್ನು ದೂಷಿಸುವ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಇವಿಎಂಗಳು 100% ಸುರಕ್ಷಿತವಾಗಿದೆ ಎಂದು ತಿಳಿಸಿದರು.
This video has triggered Congress IT Celliyas.
Who is EC talking about? Any guesses? 😁 pic.twitter.com/aT6WPPMh0p
— BALA (@erbmjha) March 16, 2024