ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶ ಚೀನಾದ ಭೂ ಪ್ರದೇಶದ ಅವಿಭಾಜ್ಯ ಅಂಗ ಎಂದು ಚೀನಾ ಮಿಲಿಟರಿ ಮತ್ತೆ ಕ್ಯಾತೆ ತೆಗೆದಿದೆ.
ಭಾರತ ಅರುಣಾಚಲ ತನ್ನದೆಂದು ಅಕ್ರಮವಾಗಿ ಹೇಳುತ್ತಿದೆ. ಈ ಮಾತನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್ ಹೇಳಿದ್ದಾರೆ. ಝಾಂಗ್ನಾನ್‌ನ ದಕ್ಷಿಣ ಭಾಗ ಚೀನಾದ ಭೂ ಪ್ರದೇಶದ ಅವಿಭಾಜ್ಯ ಅಂಗ ಎಂದು ಅವರು ಮತ್ತೆ ಒತ್ತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶದ ಭೇಟಿಗೆ ತಕರಾರು ತೆಗೆದಿದ್ದ ಚೀನಾ ಆಕ್ಷೇಪಗಳನ್ನು ಭಾರತ ತಿರಸ್ಕರಿಸಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ಇಂದಿಗೂ ಚೀನಾ ಪ್ರತಿಪಾದಿಸುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ