ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಂಜಾನ್ ಹಿನ್ನೆಲೆ ಮಕ್ಕಳು ಉಪವಾಸ ಇದ್ದರು. ಉಪವಾಸ ಅಂತ್ಯಗೊಳಿಸಿ ಜಾಮಿಯಾ ಮಸೀದಿ ಬಳಿ ಪಾನಿಪುರಿ ಸೇವಿಸಿದ್ದರು. ಮಕ್ಕಳಿಗೆ ಹೊಟ್ಟೆನೋವು, ಬೇಧಿ, ವಾಂತಿ ಕಾಣಿಸಿತ್ತು. ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅದರಲ್ಲಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮೃತರನ್ನು ಹಜರತ್ ಬಿಲಾಲ್ ಬಿನ್ ಇರ್ಫಾನ್ ಎಂದು ಹೇಳಲಾಗಿದೆ.