ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ನಡೆದ ಚುನಾವಣೆಯಲ್ಲಿ 87.8% ಮತ ಗಳಿಸುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ಆರು ವರ್ಷಗಳ ಕಾಲ ತಮ್ಮ ಅಧಿಕಾರವನ್ನು ಮತ್ತೆ ಭದ್ರಗೊಳಿಸಿದ್ದಾರೆ.
ಪುಟಿನ್ ವಿರುದ್ಧ ಮತದಾನ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿದ್ದ ಹೊರತಾಗಿಯೂ ಅವರು ಬಹುಮತದಿಂದ ಆಯ್ಕೆಯಾಗುವ ಮೂಲಕ ವಿಜಯದ ನಗೆ ಬೀರಿದ್ದಾರೆ. ಸೋವಿಯತ್ ನಂತರದ ರಷ್ಯಾದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶ ಇದಾಗಿದೆ.
ಈ ನಡುವೆ ರಷ್ಯಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು, ಈ ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿರಲಿಲ್ಲ, ಪುಟಿನ್ ತಮ್ಮ ವಿರೋಧಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಸ್ಪರ್ಧಿಸದಂತೆ ತಡೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.