ಹೊಸದಿಗಂತ, ಮಂಗಳೂರು:
ದಕ್ಷಿಣ ಕನ್ನಡ ಕೊಡಗು ಗಡಿ ಭಾಗದಲ್ಲಿ ಶಂಕಿತ ನಕ್ಸಲ್ ಚಲನವಲನ ಕಂಡುಬಂದಿದೆ.
ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿ ಬಳಿ ಎಂಟು ಮಂದಿಯಿದ್ದ ತಂಡವೊಂದು ಕೂಜಿಮಲೆ, ಕಲ್ಮಕಾರಿನ ಅಂಗಡಿಯೊಂದರಿಂದ ದಿನಸಿ ಖರೀದಿಸಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕೂಂಬಿಂಗ್ ಚುರುಕುಗೊಂಡಿದೆ.
ಈ ಹಿಂದೆ 2012ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡಿತ್ತು. ಅದಾದ ಬಳಿಕ 2018ರ ಫೆಬ್ರವರಿ ತಿಂಗಳಿನಲ್ಲಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ನಕ್ಸಲ್ ಚಲನವಲನ ಕಂಡುಬಂದ ಶಂಕೆಯ ಮೇರೆಗೆ ತನಿಖೆ ಇನ್ನಷ್ಟು ಚುರುಕುಗೊಂಡಿದೆ.