ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಾಜ್ ಮಾಡುವ ವೇಳೆ ಹನುಮಾನ್ ಚಾಲೀಸ ಹಾಕಿದ ಆರೋಪದಲ್ಲಿ ಮೊಬೈಲ್ ಅಂಗಡಿಯಾತನ ಮೇಲೆ ಐವರು ಹಲ್ಲೆ ನಡೆಸಿದ್ದಾರೆ.
ನಗರತ್‌ಪೇಟೆಯಲ್ಲಿ ಘಟನೆ ಸಂಭವಿಸಿದ್ದು, ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅನ್ಯಕೋಮಿನ ಯುವಕರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
ನಮ್ಮ ನಮಾಝ್ ವೇಳೆ ಜೋರು ಶಬ್ದ ಹಾಕಿ ಹನುಮಾನ್ ಚಾಲೀಸ ಹಾಕಿದ್ದ ಎಂದು ಯುವಕರು ಆರೋಪಿಸಿದ್ದಾರೆ. ಅಂಗಡಿಯ ಓನರ್ ಮುಖೇಶ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.