ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಆಗಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
ನನ್ನ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ಎಲ್ಲ ಪಕ್ಷದವರ ಜೊತೆಯೂ ಉತ್ತಮ ಬಾಂಧವ್ಯ ಇದೆ. ಆದರೆ ನನ್ನ ಪರಿಕಲ್ಪನೆಗೆ ಬಿಜೆಪಿ ಹೊಂದಾಣಿಕೆ ಆಗುವ ಪಕ್ಷ. ಎಲ್ಲರಿಗೂ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಆದರೆ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಸಮಾನರೇ ಅಲ್ಲವಾ? ನಾನು ನಿಮ್ಮ ಹಾಗೇ ಕೆಲಸ ಮಾಡುತ್ತೇನೆ. ನನ್ನನ್ನು ನೋಡೋದಕ್ಕೆ ಅರಮನೆಗೆ ಬರಬೇಕಿಲ್ಲ. ನಾನೇ ನಿಮ್ಮೊಂದಿಗೆ ಬೆರೆಯುತ್ತೇನೆ ಎಂದಿದ್ದಾರೆ.