ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿಗೆ ಖುದ್ದು ಹಾಜರಾಗಲು ಕೋರ್ಟ್ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

2018ರ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ವಿಚಾರಣೆ ವೇಳೆ ಅರ್ಜಿ ತಿರಸ್ಕರಿಸಿದ ಸಂಸದ-ಶಾಸಕರ ವಿಶೇಷ ನ್ಯಾಯಾಲಯ, ಖುದ್ದು ಹಾಜರಾಗುವಂತೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಜಡ್ಜ್ ರಿಶಿ ಕುಮಾರ್ ರಾಹುಲ್ ಗಾಂಧಿಗೆ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

2018ರಲ್ಲಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗ ಬಿಜೆಪಿಯಲ್ಲಿ ಯಾರೇ ಕೊಲೆಗಾರರು ರಾಷ್ಟ್ರೀಯ ಬಿಜೆಪಿ ಪಕ್ಷದ ಅಧ್ಯಕ್ಷರಾಗಬಹುದು ಎಂದು ಹೇಳಿಕೆ ನೀಡಿದ್ದರು. 2018ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ದೇಶಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.ಈ ಹೇಳಿಕೆ ವಿರುದ್ದ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಆದರೆ ಜಾರ್ಖಂಡ್ ಬಿಜೆಪಿ ಯುವ ಮೋರ್ಚಾ ಉಪಾಅಧ್ಯಕ್ಷ ಪ್ರತಾಪ್ ಕಟಿಯಾರ್ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೊಡಿದ್ದರು.ಜಾರ್ಖಂಡ್ ಚಾಯಬಸಾ ಶಾಸಕ-ಸಂಸದರ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಈಗಾಗಲೇ ರಾಹುಲ್ ಗಾಂಧಿಗೆ ಕೆಲ ಭಾರಿ ಕೋರ್ಟ್‌ಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಖುದ್ದ ಹಾಜರಾಗಿಲ್ಲ. ಈ ಬಾರಿ ರಾಹುಲ್ ಗಾಂಧಿ ಪರ ವಕೀಲರು ಹಾಜರಾಗಿ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿದ್ದಾರೆ. ಲೋಕಸಭಾ ಚುನಾವಣೆ ಸೇರಿದಂತೆ ಹಲವು ಕಾರಣಗಳನ್ನು ರಾಹುಲ್ ಗಾಂಧಿ ಪರ ವಕೀಲರು ಮಂಡಿಸಿದ್ದರು. ಆದರೆ ಈ ವಾದ ಒಪ್ಪಿಕೊಳ್ಳದ ಕೋರ್ಟ್ ಖುದ್ದು ಹಾಜರಾತಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!