RCB ಫ್ಯಾನ್ಸ್ ಗೆ ತ್ರಿಬಲ್ ಧಮಾಕ: ಕಪ್ ಗೆದ್ರು, ಹೆಸ್ರು ಚೇಂಜ್ ಆಯ್ತು, ಈಗ ‘ಕಿಂಗ್’ ಲುಕ್ ಕೂಡ ಚೇಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಮುಂಚಿತವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಹೊಸ ನೋಟದಿಂದ ಗಮನ ಸೆಳೆದಿದ್ದಾರೆ. ಆರ್‌ಸಿಬಿ ತಂಡದ ಅನ್‌ಬಾಕ್ಸಿಂಗ್ ಕಾರ್ಯಕ್ರಮಕ್ಕೂ ಮುನ್ನ ಕೊಹ್ಲಿ ತಮ್ಮ ಹೇರ್ ಸ್ಟೈಲ್‌ ಬದಲಿಸಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್​ಸಿಬಿ ತಂಡದ ಅನ್​ಬಾಕ್ಸ್​ ಕಾರ್ಯಕ್ರಮಕ್ಕೂ ಮುಂಚಿತವಾಗಿ ಕೊಹ್ಲಿ ತಮ್ಮ ಹೇರ್​ ಸ್ಟೈಲ್ ಬದಲಿಸಿಕೊಂಡಿದ್ದು, ಈ ಮೂಲಕ ಹೊಸ ಅವತಾರದಲ್ಲಿ ಮಿಂಚಿದ್ದಾರೆ.

ಇದೀಗ ಕಿಂಗ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿರಾಟ್‌ನ ಹೊಸ ಲುಕ್ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಲಿದೆ ಎಂಬ ಚರ್ಚೆಗಳೂ ನಡೆಯುತ್ತಿದೆ.

ಅಂದಹಾಗೆ ವಿರಾಟ್ ಕೊಹ್ಲಿಯ ಲುಕ್​ಗೆ ಹೊಸ ಟಚ್ ನೀಡಿದ್ದು ಮತ್ಯಾರೂ ಅಲ್ಲ. ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಈ ಹಿಂದೆ ಧೋನಿ, ಚಹಲ್ ಸೇರಿದಂತೆ ಟೀಮ್ ಇಂಡಿಯಾದ ಹಲವು ಆಟಗಾರರ ಲುಕ್ ಬದಲಿಸಿದ್ದ ಆಲಿಮ್ ಇದೀಗ ವಿರಾಟ್ ಕೊಹ್ಲಿಯನ್ನು ಸಖತ್ ಸ್ಟೈಲಿಸ್ಟ್ ಆಗಿ ತೋರಿಸಿದ್ದಾರೆ.

ಏಕೆಂದರೆ ಕಿಂಗ್ ಕೊಹ್ಲಿ ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ಆದರೆ ಕಿಂಗ್ ಕೊಹ್ಲಿಗೆ ಐಪಿಎಲ್ ಟ್ರೋಫಿ ಕನಸಾಗಿಯೇ ಉಳಿದಿದೆ. ಹೀಗಾಗಿ ಕೊಹ್ಲಿಯ ಹೊಸ ಲುಕ್ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಅಂದಹಾಗೆ, ವಿರಾಟ್ ಕೊಹ್ಲಿಗೆ ಹೊಸ ಲುಕ್ ಕೊಟ್ಟಿದ್ದು ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಅನೇಕ ಭಾರತೀಯ ತಂಡದ ಆಟಗಾರರ ಲುಕ್ ಬದಲಾಯಿಸಿರುವ ಆಲಿಮ್ ಈಗ ವಿರಾಟ್ ಕೊಹ್ಲಿ ಅವರನ್ನ ಪವರ್ ಫುಲ್ ಸ್ಟೈಲಿಸ್ಟ್ ಲುಕ್ ಅನ್ನು ನೀಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!