ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪಾಲಕ್ಕಾಡ್, ಮಲಪ್ಪುರಂ ಮತ್ತು ಪೊನ್ನಾನಿ ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಅದ್ದೂರಿ ರೋಡ್ ಶೋ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭರ್ಜರಿ ರೋಡ್ ಶೋಗೆ ಕಾರ್ಯಕರ್ತರು, ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಸ್ಥಳೀಯರು ಮೋದಿ ಮೇಲೆ ಹೂಮಳೆಗೈದರು. ಮೋದಿಯವರ ರೋಡ್ ಶೋ ಕಿಲೋಮೀಟರ್ ಗಟ್ಟಲೆ ಸಾಗಿತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ ಜಯಘೋಷಗಳು ಮೊಳಗಿದವು.
ಅಂಚುವಿಳಕ್ಕು ನಿಂದ ಹೆಡ್ ಪೋಸ್ಟ್ ಆಫೀಸ್ ರಸ್ತೆಯವರೆಗೆ ಒಂದು ಕಿಲೋಮೀಟರ್ ರೋಡ್ ಶೋ ನಡೆಸಿದರು.ಬಿಜೆಪಿ ನಾಯಕರು ಮತ್ತು ಎನ್ಡಿಎ ಅಭ್ಯರ್ಥಿಗಳು ಸಾಥ್ ನೀಡಿದರು.