ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಹತ್ಯೆಯಾದ ಪಕ್ಷದ ಕಾರ್ಯಕರ್ತನನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾದರು.
ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದಿವಂಗತ ಬಿಜೆಪಿ ನಾಯಕ ಕೆ.ಎನ್.ಲಕ್ಷ್ಮಣ್ ಸೇರಿ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದ ಮೂವರನ್ನು ಪ್ರಮುಖವಾಗಿ ನೆನಪಿಸಿಕೊಂಡರು.
ದುಷ್ಕರ್ಮಿಗಳಿಂದ ಹತ್ಯೆಯಾದ ಆಡಿಟರ್ ರಮೇಶ್ ಕುರಿತಂತೆ ಮಾತನಾಡುವಾಗ ಭಾವುಕರಾದ ಮೋದಿ, ಕೆಲ ಸಮಯ ಭಾಷಣ ನಿಲ್ಲಿಸಿದರು. ಬಳಿಕ, ಮತ್ತೆ ಭಾಷಣ ಆರಂಭಿಸಿದ ಅವರು, ಪಕ್ಷಕ್ಕಾಗಿ ರಮೇಶ್ ಮಾಡಿದ ಕೆಲಸಗಳನ್ನು ಶ್ಲಾಘಿಸಿದರು.
ನಾನು ರಮೇಶ್ ಅವರನ್ನು ಎಂದಿಗೂ ಮರೆಯುವುದಿಲ್ಲ. ಪಕ್ಷಕ್ಕಾಗಿ ಅವರು ಹಗಲು-ರಾತ್ರಿ ಎನ್ನದೆ ಬಹಳಷ್ಟು ಶ್ರಮಿಸಿದ್ದಾರೆ. ಅವರೊಬ್ಬ ಒಳ್ಳೆಯ ವಾಗ್ಮಿಯಾಗಿದ್ದರು. ಆದರೆ, ಅವರನ್ನು ಹತ್ಯೆ ಮಾಡಲಾಯಿತು. ಇಂದು ಅವರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು.
#WATCH | Tamil Nadu: Prime Minister Narendra Modi gets emotional as he remembers Former State BJP president late K.N. Lakshmanan & his contribution towards the expansion of BJP in the state. pic.twitter.com/7ZN4m3MbQx
— ANI (@ANI) March 19, 2024
ವೃತ್ತಿಯಲ್ಲಿ ಆಡಿಟರ್ ಆಗಿದ್ದ ವಿ. ರಮೇಶ್, ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು. 2013ರ ಜುಲೈನಲ್ಲಿ ಅವರ ಮನೆಯಲ್ಲಿಯೇ ರಮೇಶ್ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.
ದಿವಂಗತ ಕೆ.ಎನ್. ಲಕ್ಷ್ಮಣ್ ಅವರಿಗೂ ಶ್ರದ್ಧಾಂಜಲಿ ಅರ್ಪಿಸಿದ ಮೋದಿ, ತಮಿಳುನಾಡಿನಲ್ಲಿ ಪಕ್ಷದ ಬೆಳವಣಿಗೆಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು.