ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬಿಹಾರ್​ ಜಿಲ್ಲೆಯಲ್ಲಿ ನಡೆದಿದೆ. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಬಂಗಾಳದಲ್ಲಿ ಬೆಳಕಿಗೆ ಬಂದ ಮೊದಲ ಹಿಂಸಾಚಾರದ ಘಟನೆ ಇದಾಗಿದೆ. ಕೂಚ್‌ ಬೆಹಾರ್‌ನ ದಿನಾಟಾದಲ್ಲಿ ಕೇಂದ್ರ ಸಚಿವ ನಿಶಿತ್‌ ಪ್ರಮಾಣಿಕ್‌ ಮತ್ತು ಉಪಮುಖ್ಯಮಂತ್ರಿ ಉದಯನ್ ಗುಹಾ ಅವರ ಬೆಂಬಲಿಗರ ನಡುವೆ ತೀವ್ರ ಮಾರಾಮಾರಿ ನಡೆದಿದೆ.

ಈ ಘಟನೆಯಲ್ಲಿ ಎಸ್‌ಡಿಪಿಒ ಅವರ ತಲೆಗೆ ಗಾಯವಾಗಿದೆ. ಘಟನೆ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು. ಮಾಹಿತಿ ಪ್ರಕಾರ ಉದಯನ್ ಗುಹಾ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ, ಈ ವೇಳೆ ನಿಶಿತ್ ಪ್ರಮಾಣಿಕ್ ಅವರ ಕಾರವಾನ್ ಅಲ್ಲಿಯೇ ಸಾಗುತ್ತಿತ್ತು. ಈ ವೇಳೆ ಬೆಂಬಲಿಗರು ಪರಸ್ಪರ ಹಲ್ಲೆ ನಡೆಸಿದ್ದಾರೆ.

ಈ ವೇಳೆ ನಿಶಿತ್ ಕೂಡ ಕಾರಿನಿಂದ ಇಳಿದಿದ್ದು, ಉದಯನ್ ಕೂಡ ಹೊರಗೆ ಬಂದಿದ್ದರು. ಈ ಘಟನೆಯ ನಂತರ ಟಿಎಂಸಿ 24 ಗಂಟೆಗಳ ದಿನ್ಹತಾ ಬಂದ್ ಘೋಷಿಸಿದೆ. ಯಾವುದೇ ಪ್ರಚೋದನೆ ಇಲ್ಲದೆ ತಮ್ಮ ಬೆಂಬಲಿಗರ ಮೇಲೆ ಉದಯನ್ ಗುಹಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!