ಸಿಧು ಮೂಸೆವಾಲಾ ಪೋಷಕರಿಗೆ ಮಗು: ಪಂಜಾಬ್‌ ಸರ್ಕಾರದ ವರದಿ ಕೇಳಿದ ಕೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ 58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇತ್ತ ಐವಿಎಫ್‌ ಮೂಲಕ ಅವರ ಯಶಸ್ವಿಯಾಗಿ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಗಳು ಬಂದಿರುವ ಬೆನ್ನಲ್ಲಿಯೇ ಕೇಂದ್ರ ಸರ್ಕಾರವು ಬುಧವಾರ ಪಂಜಾಬ್ ಸರ್ಕಾರಕ್ಕೆ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಕಾನೂನಿನ ಬಗ್ಗೆ ಉತ್ತರ ಕೋರಿ ನೋಟಿಸ್ ನೀಡಿದೆ.

ಪಂಜಾಬ್‌ನ ಪ್ರಸಿದ್ಧ ಗಾಯಕನ ತಾಯಿ ಮಾರ್ಚ್‌ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ . 22 ತಿಂಗಳ ಹಿಂದೆ ಪಂಜಾಬ್‌ನ ಮಾನ್ಸಾದಲ್ಲಿ ಸಿಧು ಮೂಸೆವಾಲಾನನ್ನು ಹತ್ಯೆ ಮಾಡಲಾಗಿತ್ತು. 28 ವರ್ಷದ ಮಗ ಸಾವು ಕಂಡ 22 ತಿಂಗಳ ಬಳಿಕ ಗಾಯಕನ ತಂದೆ ಬಲ್ಕೌರ್‌ ಸಿಂಗ್‌ ಫೇಸ್‌ಬುಕ್‌ನಲ್ಲಿ ಮಗು ಹುಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷ ಕೋಟಿ ಜನರ ಆಶೀರ್ವಾದದೊಂದಿಗೆ ಸರ್ವಶಕ್ತನು ಶುಭ್ ಅವರ ಚಿಕ್ಕ ಸಹೋದರನೊಂದಿಗೆ ನಮಗೆ ಆಶೀರ್ವದಿಸಿದ್ದಾನೆ’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದರು.

ಅಸಿಸ್ಟೆಡ್‌ ರೀಪ್ರೊಡಕ್ಷನ್‌ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ರ ಸೆಕ್ಷನ್ 21(g) ಅಡಿಯಲ್ಲಿ, ಎಆರ್‌ಟಿ ಸೇವೆಗಳನ್ನು ಪಡೆಯಲು ಮಹಿಳೆಗೆ 21-50 ವರ್ಷದ ವಯಸ್ಸಿನ ಮಿತಿ ನೀಡಲಾಗಿದೆ. ಆ ಕಾರಣದಿಂದಾಗಿ ಈ ಪ್ರಕರಣದಲ್ಲಿ ವಿಷಯವನ್ನು ಪರಿಶೀಲನೆ ಮಾಡಿ ನಿಮ್ಮ ವರದಿಯನ್ನು ಸಲ್ಲಿಸಬೇಕು. ಎಆರ್‌ಟಿ (ನಿಯಂತ್ರಣ) ಕಾಯಿದೆ, 2021 ರ ಪ್ರಕಾರ ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ವರದಿಯನ್ನು ಈ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.

ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್‌ ಸಿಂಗ್‌ ಅವರು ಪಂಜಾಬ್‌ ಸರ್ಕಾರ ತಮಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಈ ನೊಟೀಸ್ ಜಾರಿ ಮಾಡಿದೆ.

ಹುಟ್ಟಿರುವ ಮಗು, ಚರಣ್‌ ಕೌರ್‌ ಅವರಿಗೆ ಸಂಬಂಧಪಟ್ಟಿದ್ದು ಎನ್ನುವ ಮಗುವಿನ ದಾಖಲೆಗಳನ್ನು ನೀಡುವಂತೆ ಪಂಜಾಬ್‌ ಸರ್ಕಾರ ಕೇಳಿದೆ. ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಸರ್ಕಾರ ತನ್ನನ್ನು ಕೇಳುತ್ತಿದೆ ಎಂದು ಬಲ್ಕೌರ್‌ ಸಿಂಗ್‌ ಅವರು ಹೇಳಿದ್ದಾರೆ.ವಾಹೆಗುರುಗಳ ಆಶೀರ್ವಾದದಿಂದ ನಾವು ನಮ್ಮ ಶುಭದೀಪ್ (ಸಿದ್ದು ಮೂಸೆವಾಲ) ಅವರನ್ನು ಮರಳಿ ಪಡೆದಿದ್ದೇವೆ, ಆದರೆ, ಸರ್ಕಾರವು ಬೆಳಿಗ್ಗೆಯಿಂದ ನನಗೆ ಕಿರುಕುಳ ನೀಡುತ್ತಿದೆ, ಮಗುವಿನ ದಾಖಲೆಗಳನ್ನು ನೀಡುವಂತೆ ಕೇಳುತ್ತಿದೆ, ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇತ್ತ ರಾಜ್ಯದ ಎಎಪಿ ಸರ್ಕಾರವು ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, ತಮ್ಮ ಸರ್ಕಾರ ಮಗುವಿನ ವಿವರಗಳನ್ನು ಹುಡುಕುತ್ತಿಲ್ಲ ಎಂದು ಹೇಳಿದೆ. ಬಿಜೆಪಿ ಆಡಳಿತದ ಕೇಂದ್ರವು ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾಹಿತಿಯನ್ನು ಕೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯನ್ನು ಪಂಜಾಬ್‌ನ ಎಎಪಿಯ ಎಕ್ಸ್ ಹ್ಯಾಂಡಲ್ ಸಹ ಹಂಚಿಕೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here