ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಮಾಜಿ ರಾಜ್ಯಪಾಲ ತಮಿಳ್‌ಇಸೈ ಸೌಂದರರಾಜನ್ ಮರಳಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಸಮ್ಮುಖದಲ್ಲಿ ತಮಿಳ್ ಇಸೈ ಬುಧವಾರ ಬಿಜೆಪಿ ಸೇರಿದರು.
ಇತ್ತ ಬಿಜೆಪಿ ಸೇರ್ಪಡೆ ಕುರಿತು ಡಿಎಂಕೆ ಮತ್ತು ಎಡಪಕ್ಷಗಳು ತಮಿಳ್‌ಇಸೈ ಅವರನ್ನು ಟೀಕಿದ್ದು, ಇದಕ್ಕೆ ತಿರುಗೇಟು ಕೊಟ್ಟ ಅಣ್ಣಾಮಲೈ ‘ಉನ್ನತ ಹುದ್ದೆಯಲ್ಲಿರುವವರು ಅಧಿಕಾರವನ್ನು ತೊರೆದು ಸಾಮಾನ್ಯ ವ್ಯಕ್ತಿಯಾಗಿ ಸಾರ್ವಜನಿಕರಿಗಾಗಿ ಮತ್ತೆ ಕೆಲಸ ಮಾಡಲು ಆರಂಭಿಸುವುದು ಸಾಧ್ಯವಿರುವುದು ಬಿಜೆಪಿಯಲ್ಲಿ ಮಾತ್ರ’ ಎಂದು ಸಮರ್ಥಿಸಿಕೊಂಡರು.