ತಾಳಿ ಕಟ್ಟುವ ವೇಳೆ ಬಾಯ್‌ಫ್ರೆಂಡ್‌ ಹುಚ್ಚಾಟ, ಮದುವೆ ಮನೆಯಲ್ಲಿ ಹೈ ಡ್ರಾಮ!

ಹೊಸದಿಗಂತ ವರದಿ ಹಾಸನ :

ತಾಳಿ ಕಟ್ಟುವ ಶುಭ ಘಳಿಗೆಗೆ ಸನ್ನಿಹಿತವಾಗಿತ್ತು. ಎಲ್ಲರೂ ಅಕ್ಷತೆ ಹಿಡಿದುಕೊಂಡು ಶುಭ ಹಾರೈಕೆಯ ಕ್ಷಣಕ್ಕಾಗಿ ಕಾದು ನಿಂತಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ  ವಧುವಿನ ಲವರ್‌ ಎಂದು ಹೇಳಿಕೊಂಡು ಬಂದಾತ ತಾಳಿ ಕಿತ್ತುಕೊಂಡು ರಂಪಾಟ ಮಾಡಿದ್ದಾನೆ. ಇದರಿಂದಾಗಿ ಮದುವೆ ಮುರಿದುಬಿದ್ದಿದೆ!

ಈ ಘಟನೆ ಇಂದು( ಗುರುವಾರ ) ಬೇಲೂರಿನ ಒಕ್ಕಲಿಗರ ಸಂಘದಲ್ಲಿ ಬೇಲೂರಿನ ತೇಜಸ್ವಿನಿ ಹಾಗೂ ಶಿವಮೊಗ್ಗ ಮೂಲದ ಪ್ರಮೋದ್‌ಕುಮಾರ್ ಮದುವೆ ನಡೆಯಬೇಕಿತ್ತು. ಮದುವೆಗೆ ಎರಡು ಕುಟುಂಬಗಳು ಸಂಭ್ರಮದಿಂದ ತಯಾರಿ ಮಾಡಿಕೊಂಡಿದ್ದರು. ಅದರಂತೆ ಕಲ್ಯಾಣ ಮಂಟಪದಲ್ಲಿ ವಿವಾಹ ಸಂಭ್ರಮ ನಡೆದಿತ್ತು. ಮದುವೆ ಶಾಸ್ತ್ರಗಳು ಮುಗಿದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹಾಸನ ಹೊರವಲಯದ ಗವೇನಹಳ್ಳಿಯ ಯುವಕ ನವೀನ್ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ತಾಳಿ ಕಸಿದುಕೊಂಡು, ವಧು ತೇಜಸ್ವಿನಿ ತನ್ನ ಪ್ರೀತಿ ವಿಷಯ ಬಯಲು ಮಾಡಿದ್ದಾನೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟು ಹಿಡಿದ ನವೀನ್ ಕೆಲ ಕಾಲ ಕಲ್ಯಾಣ ಮಂಟಪದಲ್ಲಿ ರಂಪಾಟ ಮಾಡಿದ್ದಾನೆ. ವರನ ಕಡೆಯವರು ಮದುವೆ ಮುರಿದುಕೊಂಡಿದ್ದಾರೆ.

ಪ್ರಿಯಕರ ನವೀನ್ ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ಪ್ರೀತಿ ವಿಚಾರ ಮುಚ್ಚಿಟ್ಟು ಪ್ರಮೋದ್‌ ಕುಮಾರ್ ಜೊತೆ ಮದುವೆಗೆ ತಯಾರಾಗಿದ್ದಾಳೆ. ನನ್ನ ಜೊತೆ ಮದುವೆ ಮಾಡಿಕೊಡಿ ಎಂದು ರಂಪಾಟ ಮಾಡಿದ್ದು, ಕಲ್ಯಾಣಮಂಟಪಕ್ಕೆ ಬೇಲೂರು ಪೊಲೀಸರು ಬಂದು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿ ವಿಚಾರ ತಿಳಿದು ಮದುವೆ ಬೇಡ ಎಂದು ಪ್ರಮೋದ್‌ಕುಮಾರ್ ಕಲ್ಯಾಣ ಮಂಟಪದಿಂದ ಹೊರನಡೆದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!