ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಆಮ್ ಆದ್ಮಿ ಸರ್ಕಾರದಲಿಕ್ಕರ್‌ಗೇಟ್ ಕೇಸ್‌ನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆಯಾಗಿದೆ.
ಬಂಧನದಿಂದ ವಿನಾಯಿತಿ ಕೋರಿ ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದು, ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಈ ಕೇಸ್‌ನಲ್ಲಿ ಬಂಧನದಿಂದ ವಿನಾಯಿತಿ ನೀಡಲು ನಿರಾಕರಿಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಲು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ನಿರಾಕರಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ 9 ಸಮನ್ಸ್‌ಅನ್ನು ಜಾರಿ ಮಾಡಿದ್ದು, ಈವರೆಗೂ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಯ ಈ ಹಂತದಲ್ಲಿ ನಾವು ಮಧ್ಯಂತರ ರಿಲೀಫ್ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಹಾಗಿದ್ದರೂ ನ್ಯಾಯಾಲಯವು ಈ ಹೊಸ ಮಧ್ಯಂತರ ಮನವಿಯ ಕುರಿತು ಇಡಿಯಿಂದ ಪ್ರತಿಕ್ರಿಯೆಯನ್ನು ಕೋರಿದ್ದು, ಏಪ್ರಿಲ್ 22ಕ್ಕೆ ಮುಂದಿನ ವಿಚಾರಣೆ ಮಾಡುವುದಾಗಿ ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬೆಳಗ್ಗೆ ಈ ಕುರಿತಾದ ಹೊಸ ಮನವಿಯನ್ನು ಸಲ್ಲಿಸಿದರು, ಈಗಾಗಲೇ ಹಲವು ಸಮನ್ಸ್‌ಗಳನ್ನು ನೀಡಿರುವ ಜಾರಿ ನಿರ್ದೇಶನಾಲಯದ ನಿಯಮವನ್ನು ಪಾಲಿಸಿದರೆ, ಏಜೆನ್ಸಿ ತನ್ನನ್ನು ಯಾವುದೇ ಕಾರಣಕ್ಕೂ ಬಂಧನ ಮಾಡುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಒತ್ತಾಯ ಮಾಡಿದ್ದರು.
ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು, ನಾನು ಸಮನ್ಸ್ ಅನ್ನು ಅನುಸರಿಸಿದರೆ ನನ್ನ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಮುಂದೆ ಭರವಸೆ ನೀಡಬೇಕುಎಂದು ಹೇಳಿದ್ದರು.
ಆದ್ರೆ ನಾವು ಮಧ್ಯಂತರ ಪರಿಹಾರವನ್ನು ನೀಡಲು ಒಲವು ಹೊಂದಿಲ್ಲ ಎಂದು ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಗೆ ತಿಳಿಸಿದೆ.