ಎಸ್‌ಬಿಐನಿಂದ ಪಡೆದ ಚುನಾವಣಾ ಬಾಂಡ್‌ ವಿವರ ಪ್ರಕಟಿಸಿದ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚುನಾವಣಾ ಬಾಂಡ್‌ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಚುನಾವಣಾ ಆಯೋಗಕ್ಕೆ ನೀಡಿದೆ . ಇದರ ಬೆನ್ನಲ್ಲಿಯೇ ಈ ಮಾಹಿತಿಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಇದರಲ್ಲಿ ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನು ಕೂಡ ಉಲ್ಲೇಖಿಸಿರುವುದಾಗಗಿ ತಿಳಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ತಾನು ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಒದಗಿಸಿದ್ದಾಗಿ ತಿಳಿಸಿತ್ತು. ಇದರಲ್ಲಿ ವಿಶಿಷ್ಟ ಬಾಂಡ್ ಸಂಖ್ಯೆ ಸೇರಿದಂತೆ ಖರೀದಿದಾರ ಮತ್ತು ಸ್ವೀಕರಿಸುವ ರಾಜಕೀಯ ಪಕ್ಷದ ನಡುವಿನ ಸಂಬಂಧವನ್ನು ಬಹಿರಂಗಪಡಿಸುತ್ತದೆ ಎಂದಿತ್ತು.

ಪ್ರಕಟಗೊಂಡ ಹೊಸ ಮಾಹಿತಿಯಲ್ಲಿ ಬಾಂಡ್‌ಅನ್ನು ಖರೀದಿ ಮಾಡಿದವರ ಹೆಸರು, ಅದರ ಮೊತ್ತ ಹಾಗೂ ಬಾಂಡ್‌ ನಂಬರ್‌ಅನ್ನು ಒಳಗೊಂಡಿದೆ. ಅದರೊಂದಿಗೆ ಯಾವ ಪಕ್ಷ ಈ ಬಾಂಡ್‌ಅನ್ನು ಎನ್‌ಕ್ಯಾಶ್‌ ಮಾಡಿಕೊಂಡಿದೆ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ. ಬಾಂಡ್ ಅನ್ನು ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಮತ್ತು ಎನ್‌ಕ್ಯಾಶ್ ಮಾಡಿದ ಬಾಂಡ್‌ನ ಮುಖಬೆಲೆ ಮತ್ತು ಅನನ್ಯ ಸಂಖ್ಯೆಯ ವಿವರವನ್ನೂ ತಿಳಿಸಲಾಗಿದೆ.

ಆದರೆ, ಬಾಂಡ್‌ಗಳನ್ನು ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಏಕೆಂದರೆ ಇದು ಈ ಖಾತೆಗಳ ಭದ್ರತೆಗೆ ರಾಜಿಯಾಗಬಹುದು ಎಂದು ಎಸ್‌ಬಿಐ ಚೇರ್ಮನ್‌ ಚೇರ್ಮನ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಭದ್ರತಾ ಕಾರಣಗಳಿಗಾಗಿ ಖರೀದಿದಾರರ ಕೆವೈಸಿ ವಿವರಗಳನ್ನು ಸಹ ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಎಸ್‌ಬಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!