ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಅವರು ಸಂಪೂರ್ಣ ಐದು ವರ್ಷಗಳ ಕಾಲವೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ. 2.5 ವರ್ಷದ ಒಪ್ಪಂದದ ಆಧಾರದ ಮೇಲೆ ಸಿದ್ದರಾಮಯ್ಯ ಅವರನ್ನು ಸಿಎಂ ಆಯ್ಕೆ ಮಾಡಿಲ್ಲ ಎಂದು ಅವರು ಹೇಳಿದ್ದು, ಸಿಎಂ ಬದಲಾವಣೆ ವಿಚಾರವನ್ನು ಮಾಧ್ಯಮ ಸೃಷ್ಟಿ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ರಾಯರೆಡ್ಡಿ, “ಯಾರಿಗೆ ಸಿಎಂ ಆಗಬೇಕೆಂಬ ಆಸೆ ಇರೋದಿಲ್ಲ? ನಾನು ಸೀನಿಯರ್, ನನಗೂ ಅವಕಾಶ ಬೇಕು ಅಂತ ಹೇಳಬಹುದು. ಆದರೆ ಸಿಎಂ ಬದಲಾವಣೆ ಆಗಬೇಕಾದರೆ ಶಾಸಕರ ಅಭಿಪ್ರಾಯ ಪಡೆಯಬೇಕು. ಅದೇನೂ ನಡೆದಿಲ್ಲ” ಎಂದು ಹೇಳಿದರು. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಕೆಲ ನಾಯಕರು ಮನೋರಂಜನೆಗಾಗಿ ಡಿಕೆಶಿಯನ್ನು ಸಿಎಂ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದರು.
ಇದನ್ನೂ ಓದಿ: FOOD | ಪಚ್ಚ ಪುಳಿ ರಸಂ: ತಮಿಳುನಾಡಿನ ಸ್ಪೆಷಾಲಿಟಿನೇ ಇದು! ಬಾಯಿ ಚಪ್ಪರಿಸಿಕೊಂಡು ತಿಂತೀರಾ ಪಕ್ಕಾ
ಡಿಕೆ ಶಿವಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು. ಸಿಎಂ ಆಕಾಂಕ್ಷಿಯಾಗಿರುವುದು ತಪ್ಪಲ್ಲ. ಆದರೆ ಸಮಯ ಮತ್ತು ಸಂದರ್ಭ ಮುಖ್ಯ ಎಂದು ರಾಯರೆಡ್ಡಿ ಅಭಿಪ್ರಾಯಪಟ್ಟರು.

