ಬಿಡದಿ ಮ್ಯಾರಥಾನ್, ಐಪಿಎಲ್ ವೀಕ್ಷಕರಿಗೆ ಮೆಟ್ರೋ ಸಾಥ್: ಈ ದಿನ ಓಡಾಡುತ್ತೆ ಹೆಚ್ಚುವರಿ ಸಮಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾ . 24 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಾಫ್ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು,ಹೀಗಾಗಿ ಆಗಮಿಸುವವರ ಅನುಕೂಲಕ್ಕಾಗಿ ಭಾನುವಾರದಂದು ತನ್ನ ಎಲ್ಲಾ ನಾಲ್ಕು ಟರ್ಮಿನಲ್​ಗಳಿಂದ ಮತ್ತು ಇಂಟರ್​ಚೇಂಜ್​​ ಸ್ಟೇಷನ್​​ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್​ನಿಂದ ಬೆಳಗ್ಗೆ 7ರ ಬದಲು ಮುಂಜಾನೆ 4ರಿಂದ ಮೆಟ್ರೋ (Namma Metro) ಸೇವೆ ಆರಂಭಗೊಳ್ಳಲಿದೆ.

ಅದೇ ರೀತಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 24, 29, ಏ.2ರಂದು ಐಪಿಎಲ್ ಪಂದ್ಯಾವಳಿ ಹಿನ್ನೆಲೆ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಕೊನೆಯ ಸೇವೆಯನ್ನು ರಾತ್ರಿ 11.30ರವರೆಗೆ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

IPL ಪಂದ್ಯ ನಡೆಯುವ ದಿನ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಸೇರಿ 50 ರೂ.ಗೆ ಪೇಪರ್ ಟಿಕೆಟ್ ಖರೀದಿಸಿ ಕಬ್ಬನ್​ಪಾರ್ಕ್, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಬಹುದು. ರಾತ್ರಿ 8 ಗಂಟೆಯಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ.

ಕಬ್ಬನ್​ಪಾರ್ಕ್, ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಟೋಕನ್ ಲಭ್ಯವಿರುವುದಿಲ್ಲ. ಕ್ಯೂಆರ್​​ ಕೋಡ್ ಟಿಕೆಟ್, ಸ್ಮಾರ್ಟ್ ಕಾರ್ಡ್, ಎನ್​​​ಸಿಎಂಸಿ ಕಾರ್ಡ್ ಬಳಸಬಹುದಾಗಿದೆ. ಆ ಮೂಲಕ ಟಿಕೆಟ್ ಕೌಂಟರ್​ನಲ್ಲಿ ಜನಸಂದಣಿ ತಪ್ಪಿಸಲು ಬಿಎಂಆರ್​ಸಿಎಲ್​ನಿಂದ ಕ್ರಮಕೈಗೊಳ್ಳಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ನಮ್ಮ ಮೆಟ್ರೋ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!