ಹೊಸದಿಗಂತ ಡಿಜಿಟಲ್ ಡೆಸ್ಕ್:
ಈರುಳ್ಳಿ ರಫ್ತಿನ ಮೇಲೆ ಹೇರಿರುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಮುಂದಿನ ಆದೇಶದ ತನಕ ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರವು 2024ರ ಮಾ.31ರ ವರೆಗೆ ಈರುಳ್ಳಿ ರಫ್ತು ನಿರ್ಬಂಧಿಸುತ್ತಿರುವುದಾಗಿ ಹೇಳಿತ್ತು. ಇದೀಗ ನಿಷೇಧ ಇನ್ನಷ್ಟು ವಿಸ್ತರಣೆಯಾಗಿದೆ. ಈ ನಿರ್ಧಾರವು ದೇಶದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ದರದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನೆರವಾಗಲಿದೆ ಎನ್ನಲಾಗಿದೆ.
ತರಕಾರಿ ರಫ್ತು ಮಾಡುವ ವಿಶ್ವದ ಪ್ರಮುಖ ರಾಷ್ಟ್ರವಾಗಿರುವ ಭಾರತದ ಈ ಕ್ರಮದಿಂದಾಗಿ ಬಾಂಗ್ಲಾ, ಮಲೇಷಿಯಾ, ನೇಪಾಳ, ಯುಎಇ ಮೊದಲಾದ ರಾಷ್ಟ್ರಗಳಲ್ಲಿ ಈರುಳ್ಳಿ ದರ ಈಗಾಗಲೇ ಗಗನಕ್ಕೇರಿದೆ.