ನಕ್ಸಲ್ ಕೂಂಬಿಂಗ್ ನಡುವೆಯೇ ಐನೆಕಿದು ಗ್ರಾಮದಲ್ಲಿ ಅಪರಿಚಿತರ ಚಲನವಲನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೆಡೆ ದಕ್ಷಿಣ ಕನ್ನಡ – ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿ ಕೂಂಬಿಂಗ್‌ ತೀವ್ರಗೊಂಡಿರುವ ಬೆನ್ನಿಗೇ ಇತ್ತ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿನ ಮನೆಯೊಂದಕ್ಕೆ ಅಪರಿಚಿತರ ತಂಡವೊಂದು ಭೇಟಿ ನೀಡಿ ಮೊಬೈಲ್ ಫೋನ್ ಚಾರ್ಜ್ ಮಾಡಿ ತೆರಳಿದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.

ಈ ಮನೆಯು ಅರಣ್ಯದಂಚಿನಲ್ಲಿಯೇ ಇದ್ದು, ಶನಿವಾರ ಇಳಿಸಂಜೆ ಮಳೆ ಸುರಿಯುತ್ತಿದ್ದ ಸಂದರ್ಭ ಇಲ್ಲಿಗೆ ಬಂದ ತಂಡವೊಂದು ಮನೆಮಂದಿಯಲ್ಲಿ ಮೊಬೈಲ್ ಚಾರ್ಜ್ ಮಾಡಲು ಅವಕಾಶ ಕೇಳಿದ್ದಾರೆ.

ಮನೆಮಂದಿ ಅವರನ್ನು ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆಯನ್ನು ನಕ್ಸಲ್ ನಿಗ್ರಹ ಪಡೆಯಾಗಲೀ, ಪೊಲೀಸರಾಗಲೀ ಖಚಿತಪಡಿಸಿಲ್ಲ. ವ್ಯಾಪಕವಾಗಿ ಹರಿದಾಡುತ್ತಿರುವ ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ತನಿಖೆ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!