ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆ ನೀಡಲಾಗಿದೆ.
ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ.
ಬಿಜೆಪಿಯ ಅಭ್ಯರ್ಥಿ ಸಂಜಯ್ ಸೇಠ್ ಗೆಲುವಿಗಾಗಿ ಈ ನಾಲ್ವರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು.
ಮತ್ತೊಬ್ಬ ಶಾಸಕ ಮಹಾರಾಜಿ ಪ್ರಜಾಪತಿ ಗೈರಾಗಿದ್ದರು. ರಾಕೇಶ್ ಪಾಂಡೆ ಅವರು ಸಂಸದ ರಿತೇಶ್ ಪಾಂಡೆ ಅವರ ತಂದೆ. ಅವರು ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು.