ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಈ ಕಾಯ್ದೆ ಜಾರಿಯಿಂದಾಗಿ ಸಂವಿಧಾನದಲ್ಲಿ ಹೇಳಲಾದ ಸಮಾನತೆ ನುಚ್ಚುನೂರಾಗಿದೆ ಎಂದು ಅವರು ಹೇಳಿದ್ದಾರೆ.
ಕಾಸರಗೋಡಿನಲ್ಲಿ ಸಿಪಿಐ (ಎಂ) ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಆರೆಸ್ಸೆಸ್ ವಿರುದ್ಧ ವ್ಯಾಪಕ ಟೀಕೆ ನಡೆಸಿದರು. ಆರೆಸ್ಸೆಸ್ನ ಸಿದ್ಧಾಂತ ಹಾಗೂ ರಚನೆ ಅಡಾಲ್ಫ್ ಹಿಟ್ಲರ್ ಹಾಗೂ ಬೆನಿಟೊ ಮುಸೊಲಿನಿಯ ಪ್ಯಾಶಿಸಂನಿಂದ ಅಳವಡಿಸಿಕೊಳ್ಳಲಾಗಿದೆ ಎಂದ ಅವರು, ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ, ಆರೆಸ್ಸೆಸ್ನ್ನು ಟೀಕಿಸಿದರಲ್ಲದೆ, ಆರೆಸ್ಸೆಸ್ನಿಂದ ನಿಯಂತ್ರಿಸಲ್ಪಡುತ್ತಿರುವ ಬಿಜೆಪಿ ಸರ್ಕಾರ ಜಾತ್ಯತೀತತೆಯನ್ನು ನಂಬುವುದಿಲ್ಲ ಎಂದು ಹೇಳಿದರು.