ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆ ದೊಡ್ಡಮಟ್ಟದ ಕಾರ್ಯಾಚರಣೆ ನಡೆಸಿದ್ದು, ಕಡಲ್ಗಳ್ಳರಿಂದ ಇರಾನ್ ಹಡಗು ಹಾಗೂ 23 ಪಾಕಿಸ್ತಾನೀಯರನ್ನು ರಕ್ಷಿಸಲಾಗಿದೆ.
ಇರಾನ್‌ನ ಮೀನುಗಾರಿಕಾ ಹಡಗೊಂದರ ಮೇಲೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರು ದಾಳಿ ನಡೆಸಿದ್ದರು. ಭಾರತೀಯ ನೌಕಾಪಡೆ ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಹಡಗನ್ನು ರಕ್ಷಣೆ ಮಾಡಿದೆ.
ಹಡಗಿನಲ್ಲಿ 23 ಪಾಕಿಸ್ತಾನಿಯರೂ ಇದ್ದರು, ಸಾಗರ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜನೆ ಮಾಡಲಾಗಿದ್ದ ಎರಡು ನೌಕೆಗಳು ಕಡಲ್ಗಳ್ಳರ ದಾಳಿಗೆ ಸಿಲುಕಿವೆ ಎಂಬ ಮಾಹಿತಿ ದೊರಕಿತ್ತು.
ತೀವ್ರತರದ ಕಾರ್ಯಾಚರಣೆ ನಂತರ ಕಡಲ್ಗಳ್ಳರ ವಶದಲ್ಲಿದ್ದ ನೌಕೆಯನ್ನು ವಶಪಡಿಸಿಕೊಂಡು ಕಡಲ್ಗಳ್ಳರನ್ನು ಶರಣಾಗುವಂತೆ ಸೂಚಿಸಲಾಗಿತ್ತು.