ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟ್ರೇಟ್ನಿಂಗ್ ಪ್ರಿಯರಾ? ಹಾಗಿದ್ರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ.. ಹಲವು ಬಾರಿ ಸ್ಟ್ರೇಟ್ನಿಂಗ್ ಮಾಡಿಸಿಕೊಂಡಿದ್ದ ಯುವತಿಯೊಬ್ಬಳು ಕಿಡ್ನಿ ಫೇಲ್ಯೂರ್ಗೆ ಒಳಗಾಗಿದ್ದಾಳೆ.
ಹೌದು, ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸನ್ನಲ್ಲಿ ಈ ಆರ್ಟಿಕಲ್ ಪ್ರಕಟವಾಗಿದೆ. ಯುವತಿ ಒಂದು ವರ್ಷದ ಗ್ಯಾಪ್ನಲ್ಲಿ ಹಲವಾರು ಬಾರಿ ಸ್ಟ್ರೇಟ್ನಿಂಗ್ ಮಾಡಿಸಿದ್ದಾಳೆ. ಪ್ರತೀ ಬಾರಿ ಸ್ಟ್ರೇಟ್ನಿಂಗ್ ಆದಾಗ ಯುವತಿಗೆ ವಾಂತಿ ಹಾಗೂ ಬೇಧಿ ಸಮಸ್ಯೆ ಎದುರಾಗಿದೆ.
ಇದರ ಜೊತೆಗೆ ಬೆನ್ನು ನೋವು, ಮತ್ತು ನೆತ್ತಿ ಸುಡುವಂತೆ ಆಗಿದೆ, ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಆಕೆಯ ರಕ್ತದಲ್ಲಿ ಕ್ರಿಯೇಟೀನೈನ್ ಎನ್ನುವ ಅಂಶ ಅಧಿಕವಾಗಿರುವುದು ಪತ್ತೆಯಾಗಿದ್ದು, ಇದರ ಜೊತೆಗೆ ಕಿಡ್ನಿ ಫೇಲ್ಯೂರ್ ಆಗಿದೆ. ಮೂತ್ರದಲ್ಲಿ ರಕ್ತ ಕಾಣಿಸಿದಾಗ ಆಕೆ ಭಯಬಿದ್ದಿದ್ದಾಳೆ. ಸ್ಟ್ರೇಟ್ನಿಂಗ್ ಮಾಡುವಾಗ ಬಳಸುವ ಕ್ರೀಮ್ನಲ್ಲಿರುವ ಆಸಿಡ್ನಿಂದಾಗಿ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಹೇಳಿದ್ದಾರೆ.