ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಿವಮೊಗ್ಗದ ನಂತರ ಇದೀಗ ಚಿಕ್ಕಮಗಳೂರಿನಲ್ಲಿಯೂ ಉಗ್ರರ ಜಾಲ ಇರುವುದಾಗಿ ಎನ್ಐಎ ಹೇಳಿದೆ.
ಚಿಕ್ಕಮಗಳೂರಿನ ಕಳಸದಲ್ಲಿ ಎನ್ಐಎ ಆರೋಪಿ ಮುಝಮ್ಮಿಲ್ ಷರೀಫ್ ಎಂಬಾತನನ್ನು ಬಂಧಿಸಿದೆ. ಆತನ ಮನೆ ಮೇಲೆ ದಾಳಿ ನಡೆಸಿ ಮೊಬೈಲ್ ಹಾಗೂ ಇನ್ನಿತರ ಗ್ಯಾಡ್ಜೆಟ್ಸ್ಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ಬಳಿಕ ಇದೀಗ ಆತನನ್ನು ಬಂಧಿಸಲಾಗಿದೆ.
ಸ್ಫೋಟ ನಡೆದ ದಿನ ಆತ ಬೆಂಗಳೂರಿನಲ್ಲಿದ್ದು, ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್ಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಹಾಗೂ ಸಂಚು ರೂಪಿಸಲು ಬೇಕಾದ ಸಾಮಾಗ್ರಿಗಳ ಸಾಗಾಟಕ್ಕೆ ನೆರವು ನೀಡಿದ್ದ ಎನ್ನಲಾಗಿದೆ.