ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ತೆಹ್ರಿಯಲ್ಲಿ ಕಾರು ಕಮರಿಗೆ ಬಿದ್ದು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.11 ಜನರು ಗಾಯಗೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಗಜ ತಹಸಿಲ್ನ ಗಜ-ದಂಡಚಲಿ-ಚಂಬಾ ಮೋಟಾರು ರಸ್ತೆಯ ದುವಾಕೋಟಿಧರ್ ಬಳಿ ಈ ಘಟನೆ ನಡೆದಿದೆ ಎಂದು ನರೇಂದ್ರ ನಗರ ಎಸ್‌ಎಚ್‌ಒ ಗೋಪಾಲ್ ದತ್ ಭಟ್ ತಿಳಿಸಿದ್ದಾರೆ.
ವಾಹನವು ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಿದ್ದಾಗ ವಾಹನದಲ್ಲಿ 14 ಜನರಿದ್ದರು ಎಂದು ಎಸ್‌ಎಚ್‌ಒ ಭಟ್ ತಿಳಿಸಿದ್ದಾರೆ.
ಮೃತರನ್ನು ಧರಮ್ವೀರ್ ಅಸ್ವಾಲ್ (45) ಮತ್ತು ರಿತಿಕಾ (22) ಎಂದು ಗುರುತಿಸಲಾಗಿದ್ದು, ಜಗವೀರ್ ಸಿಂಗ್ ರಾವತ್ (40) ಗಜದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಟ್ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಒಬ್ಬರು ಇನ್ನೂ ಗಜದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಉಳಿದವರನ್ನು ರಿಷಿಕೇಶದ ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.