ಕನಿಷ್ಠ 200 ಸ್ಥಾನ ಗೆಲ್ಲಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ ಎಂದು ಬಿಜೆಪಿಗೆ (BJP) ಮಮತಾ ಬ್ಯಾನರ್ಜಿ (Mamata Banerjee) ಸವಾಲು ಎಸೆದಿದ್ದಾರೆ.

ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಪರ ಪ್ರಚಾರ ಮಾಡಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಎನ್‌ಡಿಎ (NDA) ಒಕ್ಕೂಟಕ್ಕೆ ನಾನು ಸವಾಲು ಎಸೆಯುತ್ತೇನೆ. ಬಿಜೆಪಿಯವರು 400 ಪಾರ್ ಎಂದು ಹೇಳುತ್ತಿದ್ದಾರೆ. ನಾನು ಮೊದಲು 200 ಸೀಟುಗಳ ಮಾನದಂಡವನ್ನು ದಾಟಿ ಎಂದು ಸವಾಲು ಹಾಕುತ್ತೇನೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಅವರು 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ 77 ಸ್ಥಾನದಲ್ಲಿ ಮಾತ್ರ ಜಯಗಳಿಸಿದರು ಎಂದು ವ್ಯಂಗ್ಯವಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!