ಛತ್ತೀಸಗಢ ಗಡಿಯಲ್ಲಿನ ನಕ್ಸಲ್‌ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ-ಛತ್ತೀಸಗಢದ ಗಡಿಯಲ್ಲಿನ ನಕ್ಸಲರ ಶಿಬಿರದ ಮೇಲೆ ಗಢಚಿರೌಲಿ ಪೊಲೀಸರು ದಾಳಿ ನಡೆಸಿದ್ದು, ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ .

ಚ್ಯುಟಿನ್‌ಟೋಲಾ ಗ್ರಾಮದಲ್ಲಿ ಕೆಲವು ನಕ್ಸಲರು ಬಿಡಾರ ಹೂಡಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಪಡೆ ಹಾಗೂ ಸಿ-60 ತಂಡಗಳು ಶನಿವಾರ ಮುಂಜಾನೆ 450 ಮೀಟರ್‌ ಎತ್ತರದ ಬೆಟ್ಟದ ಮೇಲಿನ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ . ನಕ್ಸಲರು ಅಷ್ಟರಲ್ಲಿ ಪರಾರಿಯಾಗಿದ್ದರು. ಸ್ಫೋಟಕಗಳಲ್ಲದೆ ವೈರ್‌ಗಳು, ಬ್ಯಾಟರಿಗಳು, ವಾಕಿ-ಟಾಕಿ ಚಾರ್ಜರ್‌ಗಳು, ಬ್ಯಾಕ್‌ಪ್ಯಾಕ್‌ಗಳು ಹಾಗೂ ನಕ್ಸಲ್‌ ಬರಹಗಳಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅವರು ಹುನ್ನಾರ ಮಾಡುತ್ತಿದ್ದಾರೆ ಎಂಬ ಎಚ್ಚರಿಕೆಯೂ ದೊರೆತಿತ್ತು ಎಂದು ಗಢಚಿರೌಲಿಯ ಎಸ್‌.ಪಿ. ನೀಲೋತ್ಪಲ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!