ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ರಾಜ್ಯದಲ್ಲಿಯೂ ಹಿಂದೆಂದೂ ಕಾಣದಂತ ಬಿಸಿಲಿನ ಝಳ ಈ ಬಾರಿ ಕಂಡಿದೆ. ಅದರಲ್ಲಿಯೂ ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ಜೊತೆ ಬಿಸಿಗಾಳಿಯೂ ಬೀಸುತ್ತಿದೆ.
ಇದರಿಂದಾಗಿ ಕಳೆದ ಎರಡು ದಿನದಲ್ಲಿ ಹತ್ತು ವರ್ಷದೊಳಗಿನ 20 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಜಲೀಕರಣ, ಜ್ವರ ಹಾಗೂ ವಾಂತಿಯಿಂದ ಮಕ್ಕಳು ಹೈರಾಣಾಗಿದ್ದಾರೆ.
ಕಳೆದ ಒಂದು ವಾರದಿಂದ ಬಳ್ಳಾರಿಯಲ್ಲಿ 40 ಡಿಗ್ರಿ ಸೆಲ್ಶಿಯಸ್‌ನಷ್ಟು ತಾಪಮಾನ ಕಂಡುಬಂದಿದೆ, ಇದು 45 ಡಿಗ್ರಿಗೆ ತಲುಪುವ ಸಾಧ್ಯತೆಯೂ ಇದೆ.
ಈ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ಮಕ್ಕಳು ಹಾಗೂ ವೃದ್ಧರು ಮಧ್ಯಾಹ್ನ1 ರಿಂದ ಸಂಜೆ 4 ಗಂಟೆ ವರೆಗೆ ಬಿಸಿಲಿನಲ್ಲಿ ಓಡಾಟ ತಪ್ಪಿಸಿ ಎಂದು ಮನವಿ ಮಾಡಿದೆ.